Advertisement

ಮೋದಿ ನಾಯಕತ್ವದಿಂದ ಕಾರ್ಯಕರ್ತರಲ್ಲಿ ಹೆಚ್ಚಿದೆ ಉತ್ಸಾಹ

12:05 PM Jul 07, 2019 | Naveen |

ಮುದ್ದೇಬಿಹಾಳ: ಬಿಜೆಪಿ ಸದಸ್ಯರಾಗಲು ಹಣ ಕೊಡಬೇಕಿಲ್ಲ. ಸದಸ್ಯರಾದ ಕೂಡಲೇ ಐಡಿ ಕಾರ್ಡ್‌ ಬರುತ್ತದೆ. ನಾವು ದೇಶ ಪ್ರೇಮಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವಕಾಶ ಬಿಜೆಪಿ ಸದಸ್ಯರಾಗುವವರಿಗೆ ಒದಗಿ ಬರಲಿದೆ. ಈ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಒಂದು ಲಕ್ಷ ಜನರನ್ನು ಬಿಜೆಪಿಗೆ ಸದಸ್ಯರಾಗಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಂಘಟನಾ ಪರ್ವ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚು ಸದಸ್ಯರನ್ನು ಬಿಜೆಪಿಗೆ ಕರೆತರಬೇಕು. ದೇಶವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೀಗ ಚಾಲನೆ ನೀಡಿದ್ದಾರೆ. ಇದು ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದೆ. ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಮುಂಬರುವ ಗ್ರಾಪಂಗಳನ್ನೂ ಗೆಲ್ಲುವ ಶಕ್ತಿ ಸಂಪಾದಿಸಬೇಕು ಎಂದರು.

ಅಭಿಯಾನ ಸಂಚಾಲಕ ಸಂಗರಾಜ ದೇಸಾಯಿ, ಸಹ ಸಂಚಾಲಕ ವಿವೇಕಾನಂದ ಡಬ್ಬಿ ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನದ ಮಹತ್ವ ಮತ್ತು ಸದಸ್ಯರಾಗುವುದು ಹೇಗೆ ಎನ್ನುವ ಕುರಿತು ಮಾತನಾಡಿದರು.

ಬಿಜೆಪಿ ಧುರೀಣರಾದ ಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ ಮತ್ತಿತರರು ಸದಸ್ಯತ್ವ ಅಭಿಯಾನ ಕುರಿತು ಮಾತನಾಡಿದರು.

Advertisement

ಧುರೀಣರಾದ ಕಾಶೀಬಾಯಿ ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಪುರಸಭೆ ಮಾಜಿ ಸದಸ್ಯರಾದ ಮನೋಹರ ತುಪ್ಪದ ಹಾಗೂ ಶರಣು ಬೂದಿಹಾಳಮಠ, ಜಗದೀಶ ಪಂಪಣ್ಣವರ್‌, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ, ಭೀಮಣ್ಣ ಹರಿಂದ್ರಾಳ, ಶಂಕರಗೌಡ ಶಿವಣಗಿ, ಸಂಗಮೇಶ ಮುದ್ನಾಳ, ಹಡಲಗೇರಿ ಗ್ರಾಮದ ಬಿಜೆಪಿ ಧುರೀಣರು ವೇದಿಕೆಯಲ್ಲಿದ್ದರು. ಯರಝರಿ ಗ್ರಾಪಂ ಉಪಾಧ್ಯಕ್ಷ ಮಹಾಂತೇಶ ಪಟ್ಟಣದ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಮುಖ ರಾಜೇಂದ್ರಗೌಡ ರಾಯಗೊಂಡ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ ಅವರು ಬಿಜೆಪಿ ಸೇರ್ಪಡೆಗೊಂಡರು. ಇವರನ್ನು ಶಾಸಕ ನಡಹಳ್ಳಿ ಅವರು ಹೂಮಾಲೆ ಹಾಕಿ ಪಕ್ಷಕ್ಕೆ ಬರ ಮಾಡಿಕೊಂಡರು. ಈ ಸಂದರ್ಭ ಮಾತನಾಡಿದ ಚಲವಾದಿ ಅವರು ಪ್ರಧಾನಿ ಮೋದಿ ಸಾಮರ್ಥ್ಯ ಹಾಗೂ ಉತ್ತಮ ಆಡಳಿತ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಜನಪರ ನಿಲುವು, ಬಡವರು, ರೈತರು ಮತ್ತು ದೀನ ದಲಿತರ ಬಗೆಗೆ ತೋರಿಸುವ ಕಾಳಜಿ ಮುಂತಾದವುಗಳಿಗೆ ಮಾರುಹೋಗಿ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next