Advertisement

ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲಿ

01:35 PM Feb 02, 2020 | Naveen |

ಮುದ್ದೇಬಿಹಾಳ: ಪ್ರಶಸ್ತಿ ಮನುಷ್ಯನ ಜವಾಬ್ದಾರಿ ಹೆಚ್ಚಿಸಿ ಆತನನ್ನು ಉತ್ತುಂಗಕ್ಕೆ ಏರಿಸುತ್ತದೆ ಎಂದು ವಿಜಯಪುರ ಕಂದಾಯ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು. ಇಲ್ಲಿನ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಧರ್ಮಯುದ್ಧ ವಾರಪತ್ರಿಕೆ ಬಳಗದ ಸಹಯೋಗದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತ್ಯುತ್ಸವ, ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಎಲ್ಲರನ್ನೂ ಪ್ರೀತಿಸುವವರು ದೇವರನ್ನು ಕಾಣುತ್ತಾರೆ. ಸ್ವಾಮಿ ವಿವೇಕಾನಂದರು ದೇವರನ್ನು ಕಾಣಲು ಪ್ರಯತ್ನಿಸಿ ದೈವತ್ವ ಪಡೆದುಕೊಂಡರು. ಯುವಜನತೆ ಅವರ ಆದರ್ಶ ಪಾಲಿಸಬೇಕು ಎಂದರು. ಒಕ್ಕೂಟದ ರಾಜ್ಯಾಧ್ಯಕ್ಷ ಡಾ| ಎಸ್‌.ಬಾಲಾಜಿ ಮಾತನಾಡಿ, ಯುಶಕ್ತಿ ಪ್ರಚಂಡ ಶಕ್ತಿ. 2006ರಲ್ಲಿ ಜಾರಿಗೊಂಡ ಯುವನೀತಿ ಅಪ್ರಯೋಜಕ. ರಾಷ್ಟ್ರೀಯ ಯುವ ಕಾಯ್ದೆ ಜಾರಿಯಾಗಬೇಕು. ಇದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.

ಧರ್ಮಯುದ್ಧ ದಿನದರ್ಶಿಕೆ ಬಿಡುಗಡೆಗೊಳಿಸಿದ ಡಾ| ಜಾವೀದ್‌ ಜಮಾದಾರ ಮಾತನಾಡಿ, ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ತಂಡ ಬರಮಾಡಿಕೊಂಡು ರಾಷ್ಟ್ರೀಯ ಯುವ ವೈಭವ ಆಚರಿಸಲು ತೀರ್ಮಾನಿಸಿದ್ದು ಯುವಶಕ್ತಿ ಸಾಮಾಜಿಕ ಅನಿಷ್ಠ ನಿರ್ಮೂಲನೆಗೆ ಶ್ರಮಿಸಬೇಕು ಎಂದರು.

ಅರವಿಂದ ಜಮಖಂಡಿ, ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನಿಸಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗಂಗಾಧರಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಜೆಪಿ ಧುರೀಣೆ ಕಾಶೀಬಾಯಿ ರಾಂಪುರ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಡೆಸಿಕೊಟ್ಟರು. ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಡಾ| ರಾಘವೇಂದ್ರ ಮುರಾಳ ವಾದ್ಯ ಬಾರಿಸಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್‌.ಮದರಿ, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಸೂಡಿಮುಳ್ಳು, ಸಮಾಜಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಗಣ್ಯರಾದ ಶಿವಶಂಕರ ಸಾಲಿಮಠ, ಎಂ.ಬಿ. ನಾವದಗಿ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ಶರಣು ಬೂದಿಹಾಳಮಠ, ಶಶಿಕಾಂತ ಮಾಲಗತ್ತಿ, ಗಿರೀಶಗೌಡ ಪಾಟೀಲ, ಕಾಶಿಮಪಟೇಲ, ಬಾಳನಗೌಡ ಪಾಟೀಲ, ತಹಶೀಲ್ದಾರ್‌ ಜಿ.ಎಸ್‌. ಮಳಗಿ, ಪಿಎಸೈ ಮಲ್ಲಪ್ಪ ಮಡ್ಡಿ, ಯುವ ಸಬಲೀಕರಣ ಇಲಾಕೆ ಎಡಿ ಎಸ್‌.ಜಿ. ಲೋಣಿ, ಎಚ್‌.ಎಲ್‌.ಕರಡ್ಡಿ, ಎಸ್‌.ಬಿ.ಚಲವಾದಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಯರಝರಿಯ ಭಗತ್‌ಸಿಂಗ್‌ ಯುವಕ ಸಂಘಕ್ಕೆ ರಾಜ್ಯಮಟ್ಟದ ವಿಶೇಷ ಸದ್ಭಾವನಾ ಪ್ರಶಸ್ತಿ, ರಾಜ್ಯದ ವಿವಿಧ ಜಿಲ್ಲೆಗಳ 34 ಸಾಧಕರಿಗೆ ಸ್ವಾಮಿ ವಿವೇಕಾನಂದ ಸಾ½ವನಾ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು. ಡಿಡಿಪಿಐ (ಅಭಿವೃದ್ಧಿ) ಪದೋನ್ನತಿ ಹೊಂದಿರುವ ಎಸ್‌ .ಡಿ.ಗಾಂಜಿ ಅವರ ಬದಲು ಅವರ ಪುತ್ರ ಸತೀಶ ಗಾಂಜಿ ಪುರಸ್ಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಲಾಲ್‌, ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಮುಖಂಡ ಹುಸೇನ್‌ ಮುಲ್ಲಾ ಕಾರ್ಯಕ್ರಮ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

ಸಂಗಮೇಶ ಶಿವಣಗಿ ಪ್ರಾರ್ಥಿಸಿ ನಾಡಗೀತೆ ನಡೆಸಿಕೊಟ್ಟರು. ಒಕ್ಕೂಟದ ಜಿಲ್ಲಾಧ್ಯಕ್ಷ ಕಾರ್ಯಕ್ರಮ ಸಂಘಟಕ ಪುಂಡಲೀಕ ಮುರಾಳ ಸ್ವಾಗತಿಸಿದರು. ಕಿರುತೆರೆ ಹಾಸ್ಯಕಲಾವಿದ ಗೋಪಾಲ ಹೂಗಾರ ನಿರೂಪಿಸಿದರು. ಕಾರ್ಯಕ್ರಮ ನಂತರ ಕಿರುತೆರೆ ಕಲಾವಿದೆ ಮೋಕ್ಷಿತಾ ಪೈ, ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಟಿಕ್‌ಟಾಕ್‌ ಕಲಾವಿದರ ತಂಡ ಸಾಂಸ್ಕೃತಿಕ ವೈಭವ ನಡೆಸಿಕೊಟ್ಟಿತು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next