Advertisement

ಕಚೇರಿಗೆ ಬೀಗ ಜಡಿದು ಪ್ರತಿಭಟನೆ

04:11 PM Aug 08, 2019 | Team Udayavani |

ಮುದ್ದೇಬಿಹಾಳ: ಚಿಮ್ಮಲಗಿ ಏತ್‌ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ವಿತರಣಾ ಕಾಲುವೆ 13ಎಯನ್ನು ಮುಖ್ಯ ಕಾಲುವೆಗೆ ಜೋಡಣೆ ಮಾಡದೇ ಈ ಭಾಗದ ರೈತರನ್ನು ನೀರಾವರಿಯಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ತಾಲೂಕಿನ ನೆರಬೆಂಚಿ ಗ್ರಾಮಸ್ಥರು ಹುಡ್ಕೊ ಕಾಲೋನಿಯಲ್ಲಿರುವ ಎಎಲ್ಬಿಸಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮುದ್ದೇಬಿಹಾಳ ತಾಲೂಕಿನ ಅಕ್ಕಪಕ್ಕದಲ್ಲಿ ಎರಡು ಆಣೆಕಟ್ಟುಗಳಿವೆ. ಈಗಾಗಲೇ ಬಹು ವರ್ಷಗಳ ಹಿಂದೆಯೇ ಮುದ್ದೇಬಿಹಾಳ ಕ್ಷೇತ್ರ ಸಂಪೂರ್ಣವಾಗಿ ನೀರಾವರಿಯಾಗಬೇಕಿತ್ತು. ಆದರೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಸಮರ್ಪಕವಾಗಿ ಕಾಲುವೆಗಳನ್ನು ಮಾಡದ ಕಾರಣ ಕ್ಷೇತ್ರವು ನೀರಾವರಿಯಿಂದ ವಂಚಿತಗೊಂಡಿದೆ. ಇದನ್ನು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರೈತರಿಗೆ ಉಪಯೋಗಕ್ಕೆ ಬಾರದ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪ್ರತಿಭಟನಾ ರೈತರು ದೂರಿದರು.

ನಂತರ ಎಎಲ್ಬಿಸಿನಂ. 2ರ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಆಲಮಟ್ಟಿಯ ಕೆಬಿಜೆಎನ್‌ಎಲ್ ಎಂಡಿ ಅವರಿಗೆ ಗ್ರಾಮಸ್ಥರು ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಕೂಡಲೇ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

ಅರ್ಧಕ್ಕೆ ನಿಂತ ಕಾಲುವೆ ಕಾಮಗಾರಿ: ಮುದ್ದೇಬಿಹಾಳ ತಾಲೂಕಿನ ನೆರಬೆಂಚಿ ಗ್ರಾಮದ ಹತ್ತಿರ ಉಪ ಕಾಲುವೆಯನ್ನು ಮಾಡಲಾಗಿದೆ. ಮುಖ್ಯ ಕಾಲುವೆ ಕೇವಲ 200 ಮೀ. ಇದ್ದು ಕಾಲುವೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಉಪ ಕಾಲುವೆ ಆದರೆ ಮುಖ್ಯ ಕಾಲುವೆಗೆ ಜೋಡನೆಯಾಗದ ಕಾರಣ ಗ್ರಾಮದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮೌಖೀವಾಗಿ ಹಾಗೂ ಲಿಖೀತವಾಗಿ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಕಿವಿಗೊಡುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.

ಕಚೇರಿಗೆ ಕಾಯಂ ಬೀಗ ಜಡಿಯಲು ನಿರ್ಧಾರ: ಒಂದು ವೇಳೆ ಅಧಿಕಾರಿಗಳು ಕಾಲುವೆ ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಕೆಬಿಜೆಎನ್‌ಎಲ್ ಹಾಗೂ ಎಎಲ್ಬಿಸಿ ಕಚೇರಿಗಳಿಗೆ ಕಾಯಂ ಬೀಗ ಜಡಿಯಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಅಪ್ಪುಗೌಡ ಮೈಲೇಶ್ವರ, ಶಿವರಾಜ್‌ ಬೂದಿಹಾಳ, ಚನ್ನವೀರಪ್ಪ ಬಿರಾದಾರ, ಸಿದ್ದು ಪಾಟೀಲ, ನೀಲಪ್ಪ ಬಿರಾದಾರ, ನಿಂಗರಾಜ ಬಿರಾದಾರ, ಹನುಮಂತ ನೆರಬೆಂಚಿ, ಅಮರೇಶ ಬಿರಾದಾರ, ಹನುಮಂತ ಪತ್ತೇಪುರ, ಮುತ್ತಣ್ಣ ಬಿರಾದಾರ, ಹುಸೇನಸಾಬ ಚಪ್ಪರಬಂದ, ನಾಗರಾಜ ಬಿರಾದಾರ, ಸಿದ್ದನಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next