Advertisement

ಚುರುಕಿನಿಂದ ಕಾರ್ಯ ನಿರ್ವಹಿಸಲು ಸೂಚನೆ

04:04 PM Jun 16, 2019 | Naveen |

ಮುದ್ದೇಬಿಹಾಳ: ಚುನಾವಣೆ ಕಾರಣಗಳನ್ನು ಹೇಳಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಹಿಂದುಳಿಸಿದ್ದ ಅಧಿಕಾರಿಗಳು ಈಗಲಾದರೂ ತಾಲೂಕಿನಲ್ಲಿ ಚುರುಕಿನಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುದ್ದೇಬಿಹಾಳ ಕ್ಷೇತ್ರದಲ್ಲಿ ಮಳೆರಾಯನ ಕೃಪೆಯಾಗುತ್ತಿದ್ದು ರೈತರಿಗೆ ಬೇಕಾಗಬಹುದಾದ ರಸಗೊಬ್ಬರಗಳನ್ನು ಸರಿಯಾಗಿ ವಿತರಿಸಬೇಕು. ಅಲ್ಲದೇ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಳಿಸಿ ಬಗೆಹರಿಸುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.

ತಾಪಂ ಸದಸ್ಯ ಪ್ರೇಮಸಿಂಗ್‌ ಚವ್ಹಾಣ ಮಾತನಾಡಿ, ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ. ತಾಲೂಕಿನಲ್ಲಿ ಯಾವ ಯಾವ ಶಾಲೆಗಳಲ್ಲಿ ಎಸ್‌ಡಿಎಂಸಿ ರಚನೆಯಾಗಬೇಕು ಎಂಬ ವರದಿ ಪಡೆದುಕೊಂಡು ಅಂತಹ ಶಾಲೆಗಳಲ್ಲಿ ಕೂಡಲೇ ರಚನೆ ಮಾಡಬೇಕು. ಅಲ್ಲದೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಸಿಗಬೇಕಾದ ಪಠ್ಯಕ್ರಮ ಪುಸ್ತಕಗಳನ್ನು ಯಾವುದೇ ವಿಳಂಬವಿಲ್ಲದೇ ವಿತರಣೆಯಾಗಬೇಕು. ಆದರ್ಶ ವಿದ್ಯಾಲಯದ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಆಗಿದೆ ಎಂಬ ದೂರುಗಳು ಕೇಳಿಬಂದಿದ್ದು ಇದರ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಹೇಳಿದರು.

ತಂಗಡಗಿ ತಾಪಂ ಸದಸ್ಯ ಶ್ರೀಶೈಲ ಮರೋಳ ಮಾತನಾಡಿ, ಗ್ರಾಮದ ಸರಕಾರಿ ಶಾಲೆಯ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಖಾಸಗಿ ವ್ಯಕ್ತಿಯೊಬ್ಬರು ತಡೆಯಾಜ್ಞೆ ತಂದಿದ್ದು ನ್ಯಾಯಾಲಯಕ್ಕೆ ಪ್ರತಿ ವರದಿ ಸಲ್ಲಿಸುವಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

ಬಿಸಿಯೂಟಕ್ಕೆ ಸಾಮಗ್ರಿ ನೀಡಿ: ಶಾಲೆಗಳಲ್ಲಿ ನೀಡುವ ಬಿಸಿಯೂಟದ ಕೋಣೆಗೆ ಸುಣ್ಣ ಬಣ್ಣ ಬಳಿಸಲು ಸಣ್ಣಪುಟ್ಟ ದುರಸ್ತಿಗೆ ಪ್ರತಿ ಶಾಲೆಗೆ ತಲಾ 10 ಸಾವಿರ ಹಾಗೂ ಮಕ್ಕಳಿಗೆ ಊಟ ಬಡಿಸಲು ತಟ್ಟೆ ಮತ್ತು ಲೋಟಕ್ಕಾಗಿ ತಲಾ 5 ಸಾವಿರ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದಲ್ಲಿ ತುಂಬಾ ಅನುಕೂಲವಾಗುತ್ತದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹಲ್ದೂರ ಸಭೆಯಲ್ಲಿ ಹೇಳಿದರು.

Advertisement

ಇಒ ಮಾತಿಗೂ ಕಿಮ್ಮತ್ತಿಲ್ಲ್ಲ: ಪ್ರತಿ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಇಲಾಖೆಯ ಪ್ರಗತಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದ್ದರು. ಆದರೆ ತಾಲೂಕಿನ ಕೆಲ ಇಲಾಖೆ ಅಧಿಕಾರಿಗಳು ಪ್ರಗತಿ ವರದಿಯನ್ನು ಸಲ್ಲಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದು ತಾಲೂಕ ಪಂಚಾಯತ ಇಒ ಪ್ರಕಾಶ ದೇಸಾಯಿ ಸಭೆಯಲ್ಲ ತಿಳಿಸಿದರು. ಸಭೆಯಲ್ಲಿ ತಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next