Advertisement

8 ಪುಸ್ತಕ ಬಿಡುಗಡೆ ಮಾಡಿ ವಿಶ್ವ ದಾಖಲೆ

03:01 PM Jan 08, 2020 | Naveen |

ಮುದ್ದೇಬಿಹಾಳ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಸಾಹಿತಿ ಶಿವಕುಮಾರ ಹಡಪದ ಅವರು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ 8 ಪುಸ್ತಕಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

Advertisement

ದೀಪಕ್‌ ಶರ್ಮಾ ನೇತೃತ್ವದ ಇನ್‌ಕ್ರೆಡಿಬಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಇವರ ಸಾಧನೆಯನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಈ ದಾಖಲೆಯನ್ನು ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲೂ ದಾಖಲಿಸಲಾಗಿದೆ. ಶಿವಕುಮಾರ ಅವರು 2018 ಡಿಸೆಂಬರ್‌ 2 ರಂದು ಶಬ್ದಮಣಿಹಾರ, ವಚನವಾರಿ, ಭಾವತರಂಗ, ನೆಲಮುಗಿಲು, ವಿದ್ಯಾರ್ಥಿ ಮಿತ್ರ, ಗೀತ ಲಹರಿ, ದಾರಿದೀಪ, ಭಾವಗಾಯನ ಎನ್ನುವ ಹೆಸರಿನ ಎಂಟು ಪುಸ್ತಕಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿದ್ದರು. ಇದನ್ನು ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಕರ್ನಾಟಕದ ದಾಖಲೆಯನ್ನಾಗಿ ಪರಿಗಣಿಸಲಾಗಿತ್ತು. ನಂತರ ಇನ್‌ಕ್ರೆಡಿಬಲ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆಯನ್ನಾಗಿ ಪರಿಗಣಿಸಲಾಗಿದೆ.

ಶಿವಕುಮಾರ ಅವರು ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಬಾವೂರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಸಹ ಶಿಕ್ಷಕರಾಗಿದ್ದಾರೆ.

ಮೆಚ್ಚುಗೆ: ಇವರ ಈ ಸಾಧನೆಗೆ ಬಿಇಒ ಎಸ್‌.ಡಿ.ಗಾಂಜಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌.ಕರಡ್ಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next