Advertisement
ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಕಾಯ್ದೆ ಬೆಂಬಲಿಸುವ ವಿವಿಧ ಸಂಘಟನೆಗಳ ಸದಸ್ಯರು ತಮ್ಮ ಕೈಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಬರೆದ ನಾವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸುತ್ತೇವೆ, ವಿ ಸಪೋರ್ಟ್ ಸಿಎಎ, ಹಮ್ಸಿಎಎ ಕೋ ಸಮರ್ಥನ್ ಕರತೆ ಹೈ, ಉದ್ಘೋಷದ ಬಂಟಿಂಗ್ಸ್ ಹಿಡಿದು ಜೈ ಜೈ ಮಾತಾ, ಭಾರತ್ ಮಾತಾ, ಮಾತರಂ ಮಾತರಂ ವಂದೇ ಮಾತರಂ, ವಿ ಸಪೋರ್ಟ್ ಸಿಎಎ ಎನ್ನುತ್ತಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚರಿಸಿದರು.
ಧುರೀಣರಾದ ಪ್ರಭು ಕಡಿ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ,
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಈ ದೇಶದ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟು ಮಾಡುವುದಿಲ್ಲ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರು ಕಾಯ್ದೆಯಿಂದ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ ಎನ್ನುವ ಭರವಸೆಯನ್ನು ಜನತೆಗೆ ಕೊಟ್ಟಿದ್ದಾರೆ. ಕಾಂಗ್ರೆಸ್ಸಿಗರು ಮುಸ್ಲಿಂ ಬಂಧುಗಳನ್ನು ಬಳಸಿಕೊಂಡು ವಿರೋಧ, ಪ್ರತಿಭಟನೆಯಂಥ ಚಟುವಟಿಕೆ ನಡೆಸುತ್ತಿರುವುದು ಸರಿ ಅಲ್ಲ. ಕಾಯ್ದೆ ವಿರೋಧಿಸುವ ಪ್ರಚೋದನೆ ಕೊಡುವುದರಿಂದ ಕಾಂಗ್ರೆಸ್ ಸರ್ವನಾಶ ಖಚಿತ. ಅನೇಕ ಮುಸ್ಲಿಮರು ಕಾಯ್ದೆ ಪರ ಇದ್ದಾರೆ. ಬಹುತೇಕ ಮುಸ್ಲಿಂ ಧರ್ಮಗುರುಗಳು ಕಾಯ್ದೆಯಿಂದ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಒಳ್ಳೇಯದನ್ನೇ ಮಾಡಿದ್ದಾರೆ. ಈ ಕಾಯ್ದೆ ಯಾರಿಗೂ ತೊಂದರೆ ಕೊಡುವಂಥದ್ದಲ್ಲ. ಕಾಯ್ದೆಯಲ್ಲಿ
ಏನಿದೆ ಅನ್ನೋದನ್ನ ಎಲ್ಲರೂ ತಿಳಿದುಕೊಳ್ಳಲು ಮುಂದಾಗಬೇಕು ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಸದಸ್ಯರಾದ
ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಬಿಜೆಪಿ ಧುರೀಣರಾದ ಬಿ.ಪಿ. ಕುಲಕರ್ಣಿ, ರಾಜಶೇಖರ ಹೊಳಿ, ಸಿ.ಎಸ್.ಹಾವರಗಿ, ಮನೋಹರ ತುಪ್ಪದ, ಜಗದೀಶ್ ಪಂಪಣ್ಣವರ, ಪುನೀತ ಹಿಪ್ಪರಗಿ, ಮಂಜುನಾಥ ರತ್ನಾಕರ, ಮಾಣಿಚಂದ ದಂಡಾವತಿ, ಶರಣು ಬೂದಿಹಾಳಮಠ, ಅಶೋಕ ರಾಠೊಡ, ಬಸನಗೌಡ ಪಾಟೀಲ್ ನಡಹಳ್ಳಿ, ಶಿವು ಕನ್ನೊಳ್ಳಿ, ವಿಜಯಕುಮಾರ ಬಡಿಗೇರ, ಅಶೋಕ ಚಿನಿವಾರ, ಸೋಮಶೇಖರ ಮೇಟಿ, ಡಾ| ವೀರೇಶ ಪಾಟೀಲ, ಎಸ್.ಪಿ.ಬಾದರಬಂಡಿ, ಹಣಮಂತ ಅಂಬಿಗೇರ, ಸಂಜು ಬಾಗೇವಾಡಿ, ಶ್ರೀಕಾಂತ ಹಿರೇಮಠ,
ಪ್ರಶಾಂತ ಸಜ್ಜನ, ವೀರೇಶ ಕಲ್ಲೂರ, ಹನುಮಂತ ಕಲ್ಯಾಣಿ, ನಾಗಪ್ಪ ರೂಢಗಿ, ಗೌರಮ್ಮ ಹುನಗುಂದ, ಶಿಲ್ಪಾ ಶರ್ಮಾ, ನೀಲಮ್ಮ ಛಲವಾದಿ, ಲಕ್ಷ್ಮೀಬಾಯಿ ದಾಸರ, ಸಂಗೀತಾ ವಡ್ಡರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.