Advertisement
ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದ ಹನುಮೇಗೌಡ ಬಳಿಕ ನಾಮಪತ್ರ ಹಿಂಪಡೆದಿದ್ದರು. ಇದಕ್ಕಾಗಿ ಅವರಿಗೆ 3.5 ಕೋ.ರೂ. ಹಣ ಸಂದಾಯವಾಗಿದೆ ಎಂಬ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಅವರ ಭೇಟಿ ತೀವ್ರ ಕುತೂಹಲ ಸೃಷ್ಟಿಸಿತ್ತು.
Related Articles
Advertisement
ಮನವರಿಕೆಯಾಗಿ ಹಿಂದೆಗೆತಅಸಮಾಧಾನಗೊಂಡು ನಾಮಪತ್ರ ಸಲ್ಲಿಸಿದ್ದು ನಿಜ. ಆದರೆ ಪಕ್ಷದ ಪ್ರಮುಖರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಡಾ| ಜಿ. ಪರಮೇಶ್ವರ್ ಮತ್ತು ದಿನೇಶ್ ಗುಂಡೂ ರಾವ್ ಅವರು ಮೈತ್ರಿ ಅಭ್ಯರ್ಥಿಗೆ ಸೀಟು ಬಿಟ್ಟುಕೊಡುವ ಅನಿವಾರ್ಯ ತೆಯನ್ನು ಮನವರಿಕೆ ಮಾಡಿದ ಬಳಿಕ ನಾಮಪತ್ರ ಹಿಂಪಡೆದು ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದೇನೆ. ಪ್ರಸ್ತುತ ಈ ಆಡಿಯೋ ವೈರಲ್ ಆಗುತ್ತಿದ್ದು, ಇದಕ್ಕೆ ಸ್ಪಷ್ಟನೆ ಕೊಡ ಬೇಕಾ ದವರು ಸುಮ್ಮನಿದ್ದಾರೆ ಎಂದು ಮುದ್ದಹನುಮೇಗೌಡ ಹೇಳಿದರಾದರೂ ಯಾರು ಸ್ಪಷ್ಟನೆ ಕೊಡ ಬೇಕು ಎಂಬುದನ್ನು ತಿಳಿಸಲು ನಿರಾಕರಿಸಿದರು. ಕಾಂಗ್ರೆಸ್‌ನ ನಾಯಕರು ತನ್ನ ಪರ ನಿಂತಿದ್ದು, ಪಕ್ಷದ ವತಿಯಿಂದ ದೂರನ್ನೂ ನೀಡಲಾಗಿದೆ ಎಂದರು. ಟಿಕೆಟ್ ತಪ್ಪಿರುವುದಕ್ಕೆ ಬೇಸರವಿದೆ
ಟಿಕೆಟ್ ತಪ್ಪಿರುವುದಕ್ಕೆ ಬೇಸರವಿದೆ. ಇಂತಹ ಕ್ಷೇತ್ರಕ್ಕೆ ಬಂದು ಬೇಸರವಿಲ್ಲ ಎಂದು ಸುಳ್ಳು ಹೇಳಲು ಸಾಧ್ಯವಿದೆಯೇ ಎಂದು ಮುದ್ದ ಹನುಮೇಗೌಡರು ಹೇಳಿದರು. ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆಯೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಮತದಾರರು ತೀರ್ಮಾನಿಸುತ್ತಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದಷ್ಟೇ ತಿಳಿಸಿದರು.