Advertisement

Mudbidri; ಬಸ್‌-ಆಟೋ ಢಿಕ್ಕಿ: ಮಹಿಳೆ ಸಾವು

01:06 AM Oct 10, 2023 | Team Udayavani |

ಮೂಡುಬಿದಿರೆ: ಖಾಸಗಿ ಶಿಕ್ಷಣಾಲಯದ ಬಸ್ಸು ಮತ್ತು ಆಟೋ ರಿûಾ ಮುಖಾಮುಖೀ ಢಿಕ್ಕಿಯಾದ ಪರಿಣಾಮವಾಗಿ ಆಟೋ ರಿûಾದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಮೃತಪಟ್ಟ ಘಟನೆ ಸಮೀಪದ ಸಂಪಿಗೆಯಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ಸುರತ್ಕಲ್‌ನ ಆಲಿಯಮ್ಮ (76) ಮೃತಪಟ್ಟವರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುರತ್ಕಲ್‌ನಿಂದ ಮೂಡುಬಿದಿರೆಗೆ ಬಂದಿದ್ದ ಫಾತಿಮಾ, ಆಯೀಷಾ ಹಾಗೂ ಆಲಿಯಮ್ಮ ಅವರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಸಂಪಿಗೆಯಲ್ಲಿ ಮೂಡುಬಿದಿರೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಬಸ್‌ ಢಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಆಲಿಯಮ್ಮ ಅಸುನೀಗಿದ್ದು ಉಳಿದಿ ಬ್ಬರು ಸಣ್ಣಪುಟ್ಟ ಗಾಯಗ ಳೊಂದಿಗೆ ಪಾರಾಗಿದ್ದಾರೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಸ್ಸಿನ ಚಾಲಕ ಸಂದೇಶ್‌ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿ ಯುವಕ ಆತ್ಮಹತ್ಯೆ
ವಿದ್ಯಾಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಬಾಗಲ ಕೋಟೆಯ ಹನುಮಂತಪ್ಪ (24) ಸೋಮವಾರ ಮಧ್ಯಾಹ್ನ ಹಾಸ್ಟೆಲಿನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ.

ಆಳ್ವಾಸ್‌ ಪತ್ರಿಕೋದ್ಯಮ ಪಿಜಿ ವಿಭಾಗದ ಹಳೆವಿದ್ಯಾರ್ಥಿ ಹನುಮಂತಪ್ಪ ಈ ವರ್ಷ ಜನವರಿಯಲ್ಲಿ ದಾಖಲಾತಿ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹನುಮಂತಪ್ಪನ ಹೆತ್ತವರು ಮೂಡುಬಿದಿರೆಗೆ ಬರುವುದನ್ನು ಕಾಯಲಾಗುತ್ತಿದೆ.

Advertisement

ಹಕ್ಕುಪತ್ರಕ್ಕೆ ಹಣ ಪಡೆದು ವಂಚನೆ
ಭೂಕಂದಾಯ ಕಾಯ್ದೆಯ ಕಲಂ 94ಸಿ ಅಡಿ ಹಕ್ಕುಪತ್ರ ಮಾಡಿಕೊಡುವುದಾಗಿ ನಂಬಿಸಿ 1.04 ಲಕ್ಷ ರೂ. ಪಡೆದು ವಂಚಿಸಿರುವ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಇರುವೈಲಿನ ಗಂಗಾಧರ ಪೂಜಾರಿ ಬಂಗಾರು ಅವರಿಗೆ ದಿನೇಶ್‌ ಬಾಂಬಿಲ ಹಕ್ಕುಪತ್ರ ಮಾಡಿಕೊಡುವುದಾಗಿ 1 ಲಕ್ಷ 4 ಸಾವಿರವನ್ನು ಪಡೆದುಕೊಂಡು ಹಕ್ಕುಪತ್ರ ಮಾಡಿಕೊಡದೆ ವಂಚನೆ ಮಾಡಿದ್ದ. ಈ ಬಗ್ಗೆ ಗಂಗಾಧರ್‌ ಅವರು ಮೂಡುಬಿದಿರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ಸಂದೇಶ್‌ ಪಿ.ಜಿ. ಅವರು ತಾಲೂಕು ಕಚೇರಿ ಬಳಿ ಸೋಮವಾರ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next