Advertisement

ಐಐಟಿ ಮಾದರಿಯಲಿ ಐಐಎಸ್‌ ತೆರೆಯಲು ಒಪ್ಪಿಗೆ 

03:48 PM Oct 28, 2018 | Team Udayavani |

ಮುಂಡರಗಿ: ದೇಶದಲ್ಲಿ ಐಐಟಿ ಮಾದರಿಯಲ್ಲಿ ಆರು ಭಾರತೀಯ ತಾಂತ್ರಿಕ ಕೌಶಲಾಭಿವೃದ್ಧಿ (ಐಐಎಸ್‌) ರಾಷ್ಟ್ರ ಮಟ್ಟದ ಸಂಸ್ಥೆ ತೆರೆಯಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೇ ಎಂಟು ಕೌಶಲಾಭಿವೃದ್ಧಿ ವಿಶ್ವ ವಿದ್ಯಾಲಯ ತೆರೆಯಲಾಗುತ್ತಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು. 

Advertisement

ಮುಂಡರಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೌಶಲಾಭಿವೃದ್ಧಿಯು ಹೊಸ ಮಾನದಂಡವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಕೌಶಲದ ಮೂಲಕ ಜೌದ್ಯೋಗಿಕ ಮತ್ತು ವ್ಯಾಪಾರದ ಮನೆಗಳು ಸೇರಿದಂತೆ ಬದುಕಿನ ಎಲ್ಲ ರಂಗಗಳಿಗೂ ಅಪ್ರಂಟಿಸ್‌ ವಿಸ್ತರಿಸಲಾಗುತ್ತಿದೆ. ಭಾರತದಲ್ಲಿರುವ ಹದಿಮೂರು ಸಾವಿರ ಐಟಿಐಗಳನ್ನು ವಿಶ್ವ ಬ್ಯಾಂಕ್‌ ಸಹಾಯದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸ್ಕಿಲ್‌ ಆನ್‌ ವ್ಹೀಲ್‌ ಸಂಕಲ್ಪವನ್ನು ಉದ್ಯಮಶೀಲತೆಯಿಂದ ಕರ್ನಾಟಕದಲ್ಲಿ ಸಾಕಾರಗೊಳಿಸಲಾಗಿದೆ ಎಂದರು.

ಕರ್ನಾಟಕ ಸರ್ಕಾರವು ಈ ಯೋಜನೆ ಮುಂದುವರಿಸುತ್ತಿದೆ. ಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಕಾರಗೊಂಡಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗಕ್ಕಾಗಿ ಶಕ್ತಿ ಸಾಮರ್ಥ್ಯ ಆಧರಿಸಿ ಆಪ್ತ ಸಮಾಲೋಚನೆ ಮೂಲಕ ಕೇಂದ್ರೀಯ ವಿದ್ಯಾಲಯಗಳಲ್ಲಿ ತರಬೇತಿ ಮಾರ್ಗದರ್ಶನ ನೀಡಲಾಗುತ್ತದೆ. ಕೌಶಲಾಭಿವೃದ್ಧಿ ಭಾರತವು ವಿಶ್ವ ಕೌಶಲಾಭಿವೃದ್ಧಿ ಭಾರತವಾಗುವ ದಿಶೆಯಲ್ಲಿ ಜಪಾನ್‌, ಫಿನ್‌ಲ್ಯಾಂಡ್, ಕೆನಡಾ, ಸ್ವಿಡ್ಜರ್‌ಲ್ಯಾಂಡ್‌ ಆಸ್ಟ್ರೇಲಿಯಾ, ಸ್ವೀಡನ್‌ ದೇಶಗಳ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ಬೇಡಿಕೆ ಪೂರೈಸಲು ಸಹಕಾರ ನೀಡಲಾಗುತ್ತಿದೆ. ಜಪಾನ್‌ ದೇಶಕ್ಕೆ ನಲವತ್ತು ಸಾವಿರ ಕೌಶಲಾಭಿವೃದ್ಧಿ ತಂತ್ರಜ್ಞರನ್ನು ಕಳುಹಿಸಿ ಕೊಡಲಾಗುವುದು ಎಂದರು.

ಅಲ್ಲದೇ 13 ಸಾವಿರ ಐಟಿಐಗಳು, 585 ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಕೇಂದ್ರಗಳು, 250 ಜನತಾ ಶಿಕ್ಷಣ ಸಂಸ್ಥೆಗಳ ಮೂಲಕ 65 ಲಕ್ಷ ಯುವಕರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿದ್ದೇವೆ. ಪ್ರತಿವರ್ಷವು ಎರಡು ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಕಾಲೇಜುಗಳಿಂದ ಹೊರಬರುತ್ತಾರೆ. ಅದರಲ್ಲೀ ಶೇ.67ರಷ್ಟು ಜನರು ಉದ್ಯೋಗ ಬದಲಾವಣೆ ಮಾಡಿಕೊಳ್ಳುತ್ತಾರೆ. ಜೊತೆಗೆ ಶೇ.27ರಷ್ಟು ಉದ್ಯೋಗಗಳ ಬದಲಾಗುತ್ತವೆ. ಕಳೆದ 70 ವರ್ಷಗಳಲ್ಲಿ ಸಾಧಿಸಲಾರದನ್ನು ಬರೀ 4 ವರ್ಷಗಳಲ್ಲಿ ಸಾಧನೆ ಮಾಡಲು ಕಷ್ಟದಾಯಕವಾಗಿದೆ. ಯೋಜನೆಯ ಪರಿಕಲ್ಪನೆ ದೊಡ್ಡದಿದ್ದು, ವೇಗವಾಗಿ ತಲುಪಲು ಪ್ರಯತ್ನಿಸಲಾಗುವುದು. ಗ್ರಾಮೀಣ ಪ್ರದೇಶಕ್ಕೂ ಕೂಡಾ ಕೌಶಲಾಭಿವೃದ್ಧಿ ಕೇಂದ್ರಗಳನ್ನು ವಿಸ್ತರಣೆ ಮಾಡಬೇಕಿದೆ ಎಂದರು.

ಹುಬ್ಬಳ್ಳಿಯ ಗುರುರಾಜ ದೇಶಪಾಂಡೆ ಫೌಂಡೇಷನ್‌ ಅಡಿಯ ಸ್ಯಾಂಡ್‌ ಬಾಕ್ಸ್‌ ಮೂಲಕ ದೇಶದ ತುಂಬೆಲ್ಲ ವ್ಯಾಪಿಸುವ ಯೋಜನೆಯು ಇದ್ದು, ಈ ದಿನವೇ ಮಾತುಕತೆ ಮಾಡಿ ಬಂದಿದ್ದೇನೆ. ಒಂದು ವರ್ಷದ ಅವಧಿಯಲ್ಲಿ ಕಾರ್ಯವನ್ನು ಜಾರಿಗೆ ತರಲಾಗುವುದು. ಮುಂಡರಗಿ ಭಾಗದಲ್ಲಿ ಖುಷ್ಕಿ ಪ್ರದೇಶದ ಭೂಮಿಯಲ್ಲಿ ಯಾವ ತೆರನಾಗಿ ಲಾಭದಾಯಕವಾಗಿ ಬೆಳೆ ಪದ್ಧತಿಯನ್ನು ಅಳವಡಿಸುವ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.

Advertisement

ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ದೇವಪ್ಪ ಕಂಬಳಿ, ರವೀಂದ್ರ ಉಪ್ಪಿನಬೆಟಗೇರಿ, ವಿರೂಪಾಕ್ಷಪ್ಪ ಅಣ್ಣಿಗೇರಿ, ಮಂಜುನಾಥ ಇಟಗಿ, ಶಿವನಗೌಡ ಗೌಡ್ರ, ಪ್ರಭು ಅಬ್ಬಿಗೇರಿ, ನಾಗೇಶ ಹುಬ್ಬಳ್ಳಿ, ಕಿಟ್ಟಪ್ಪ ಮೋರನಾಳ, ಯಲ್ಲಪ್ಪ ಕುಕನೂರು, ವೀರೇಶ ಸಜ್ಜನ, ಮುದುಕಪ್ಪ ಕುಂಬಾರ, ಸುಭಾಸ ಗುಡಿಮನಿ, ದುದ್ದು ನಾಗರಳ್ಳಿ, ಶಿವು ನಾಡಗೌಡ, ಮಂಜುನಾಥ ನಾಯಕ, ಶಿವು ನವಲಗುಂದ, ಶ್ರೀನಿವಾಸ ಕಟ್ಟಿಮನಿ, ಅನೂಪಕುಮಾರ ಹಂಚಿನಾಳ, ದೇವಪ್ಪ ಇಟಗಿ, ನಾಗರಾಜ ಹಾನಗಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next