Advertisement

Mudalagi: ಹರಿಯುವ ನೀರಿನಲ್ಲಿ ಭಾರಿ ಪ್ರಮಾಣದ ನೊರೆ… ರೋಗ ಹರಡುವ ಭೀತಿಯಲ್ಲಿ ಸ್ಥಳೀಯರು

12:28 PM Jan 04, 2024 | |

ಮೂಡಲಗಿ : ಹರಿಯುವ ನೀರಿನ ಮಧ್ಯೆ ನಿಧಾನಕ್ಕೆ ಬಂದು ಸೇರುತ್ತಿರುವ ಬಿಳಿ ಬಣ್ಣದ ನೊರೆ, ನೋಡ ನೋಡುತ್ತಿದ್ದಂತೆಯೆ ನೀರಿನ ಮೇಲೆಯೇ ರಾಶಿಯಾಗಿ ನಿಲ್ಲುತ್ತಿದ್ದು, ಪಟ್ಟಣದ ಮಧ್ಯದಲ್ಲಿ ಹರಿಯುವ ಹಳ್ಳದಲ್ಲಿ ಗುರುವಾರ ಬೆಳಿಗ್ಗೆ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisement

ಇದೇ ಮೊದಲ ಬಾರಿಗೆ ಈ ರೀತಿ ಹಳ್ಳದಲ್ಲಿ ನೊರೆ ಹರಿದು ಬಂದಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಪಟ್ಟಣದ ಚರಂಡಿ, ಬಸ್ ನಿಲ್ದಾಣ ಪಕ್ಕದ ಶೌಚಾಲಯ ಬಳಿ ತ್ಯಾಜ್ಯ ತುಂಬಿದ್ದು, ಎಲ್ಲೆಂದರಲ್ಲಿ ಗಬ್ಬೆದ್ದು ನಾರಿತ್ತಿರುವ ವಾತಾವರಣ ಕಂಡು ಬಂದಿದೆ. ಈ ಅವಸ್ಥೆಯಿಂದ ಸೊಳ್ಳೆ, ನೋಣ, ಕ್ರೀಮಿ ಕೀಟಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.

ಪಟ್ಟಣದ ಅರ್ಧ ಭಾಗದ ಮನೆಗಳ ಕೊಳಚೆ ನೀರು ಇದೇ ಹಳ್ಳಕ್ಕೆ ಬಿಡುತ್ತಾರೆ. ಚರಂಡಿ ನೀರಿನ ಜತೆಗೆ ಈ ಮಲಿನ ನೀರು ಹಳ್ಳದಲ್ಲಿ ಮಡುಗಟ್ಟಿ ನಿಂತು, ಜಲಮೂಲ ಕಲುಷಿತಗೊಂಡಿದೆ. ಮಳೆಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಈ ಹಳ್ಳದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಗುರುವಾರ ಹಳ್ಳದ ಒಡಲಲ್ಲಿದ್ದ ವಿಷಯುಕ್ತ ನೀರು ನೊರೆಯಾಗಿ ಪರಿವರ್ತನೆಯಾಗಿರಬಹುದು ಎಂಬ ಶಂಕೆಯನ್ನು ಈ ಭಾಗದ ಜನರು ವ್ಯಕ್ತಪಡಿಸಿದ್ದಾರೆ.

ಹಳ್ಳದಲ್ಲಿ ಈ ನೊರೆ ಕಾಣಿಸಿಕೊಂಡಿದ್ದರಿಂದ ಯಾವ ರೋಗ ಬರುತ್ತೇನೋ ಅನ್ನೋ ಭಯದಲ್ಲಿ ಹಳ್ಳದ ಪಕ್ಕದಲ್ಲಿ ಇರುವ ಮನೆಗಳ ಸಾರ್ವಜನಿಕರಲ್ಲಿ ಭಯ ಹುಟ್ಟುವಂತಾಗಿದೆ.

ಸುಮಾರು ತಿಂಗಳಿಂದ ಮಲಿನಗೊಂಡ ಹಳ್ಳದ ನೀರನ್ನ ಕಂಡು ಕಾಣದವರಂತೆ ವರ್ತಿಸುತ್ತಿರುವ ಪುರಸಭೆಯ ಮುಖ್ಯಧಿಕಾರಿ, ಇಂಜಿನಿಯರ್, ಆರೋಗ್ಯ ನಿರೀಕ್ಷಕ ಇನ್ನಾದರೂ ಜನರ ಹಿತದೃಷ್ಟಿಯಿಂದ ಈ ಸಮಸ್ಯೆಯಿಂದ ಜನರಿಗೆ ಪರಿಹಾರ ಮಾಡುತ್ತಾರೋ? ಕಾದು ನೋಡಬೇಕಿದೆ.

Advertisement

ಇದನ್ನೂ ಓದಿ: Watch: Ram Temple- ಭವ್ಯ ರಾಮಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿಡಿಯೋ ನೋಡಿ…

Advertisement

Udayavani is now on Telegram. Click here to join our channel and stay updated with the latest news.

Next