Advertisement

ಮೂಡಲಗಿ: ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ

05:46 PM Jan 23, 2023 | Team Udayavani |

ಮೂಡಲಗಿ: ದೇಶದ ಗಡಿ ಕಾಯುವ ಯೋಧರ ಬಗ್ಗೆ ತಮಗೆ ಅಪಾರ ಗೌರವವಿದ್ದು, ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘದ ಕಚೇರಿಗೆ ನಿವೇಶನ ನೀಡುವುದರ ಜೊತೆಗೆ ಸಂಘದ ಕಟ್ಟಡಕ್ಕೂ ಸಹ ನೆರವು ನೀಡುವುದಾಗಿ ಶಾಸಕ ಮತ್ತು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

Advertisement

ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ಮಠದ ಆವರಣದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮೂಡಲಗಿ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ತಿಂಗಳೊಳಗೆ ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ನಿವೇಶನವನ್ನು ನೋಂದಣಿ ಮಾಡಿಕೊಡಲಾಗುವುದು. ಗಡಿ ರಕ್ಷಣೆಗೆ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿರುವ ಮಾಜಿ ಸೈನಿಕರಿಗೊಂದು ನಾನು ನೀಡುತ್ತಿರುವ ಚಿಕ್ಕ ಕಾಣಿಕೆ ಎಂದು ಹೇಳಿದರು.

ಮಾಜಿ ಸೈನಿಕರ ಬೇಡಿಕೆಗಳ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಬರುವ ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಅರಭಾವಿ ಮತಕ್ಷೇತ್ರದ ಮಾಜಿ ಸೈನಿಕರನ್ನು ಒಳಗೊಂಡ ನಿಯೋಗವನ್ನು ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ಒಯ್ಯಲಾಗುವುದು. ಪ್ರತಿ ಜಿಲ್ಲೆಗೊಂದರಂತೆ ಸೈನಿಕ ಭವನ ನಿರ್ಮಾಣ ಹಾಗೂ ಜಮೀನು ನೀಡುವುದರ ಬಗ್ಗೆ ಬರುವ ಬಜೆಟ್‌ ಅಧಿ ವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.

ಕೆಲವೆಡೆ ಮಾಜಿ ಸೈನಿಕರಿಗೆ ಮೀಸಲಿಟ್ಟ ಜಮೀನು ಒತ್ತುವರಿಯಾಗಿವೆ. ಇದು ಕೂಡ ಮಾಜಿ ಸೈನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಸೈನಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಎನ್‌.ಕೆ ಮಾತನಾಡಿ, ನ್ಯಾಷನಲ್‌ ಆರ್ಮಿ ಕಟ್ಟಿದ ನೇತಾಜಿ ಅವರು ನಮಗೆಲ್ಲ ಭಾರತದ ಪ್ರಪ್ರಥಮ ಪ್ರಧಾನಿ ಇದ್ದಂತೆ. ಸೆ„ನಿಕರಿಗಾಗಿಯೇ ಸರ್ಕಾರವು ಹೊಸ ನಿಗಮ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿದರು. ಮಾಜಿ ಸೈನಿಕ ಹಾಗೂ ಅವರಾದಿ ಗ್ರಾಪಂ ಮಾಜಿ ಅಧ್ಯಕ್ಷ ಸತ್ತೆಪ್ಪ ನಾಯಿಕ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಎಲ್ಲ ಮಾಜಿ ಸೈನಿಕರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲವಾಗಿ
ನಿಲ್ಲೋಣ ಎಂದರು.

Advertisement

ಸುಣಧೋಳಿಯ ಶಿವಾನಂದ ಸ್ವಾಮಿಗಳು, ನಾಗನೂರಿನ ಸದಾನಂದ ಸ್ವಾಮಿಗಳು ಮತ್ತು ಶಾಂತಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಘಟಪ್ರಭಾ ಜೆ.ಜಿ ಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್‌. ಪಾಟೀಲ, ಮಾಜಿ ಸಚಿವ ಆರ್‌.ಎಂ. ಪಾಟೀಲ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ, ಮೂಡಲಗಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್‌.ಎಂ. ಮಾಳೇದವರ,ಉಪಾಧ್ಯಕ್ಷ ಅರ್ಜುನ ಕೋಲುರ, ಶಿವಪ್ಪ ಮಾಲಗಾರ, ಬಿಇಓ ಅಜೀತ ಮನ್ನಿಕೇರಿ, ಪಿಎಸ್‌ಐ ಎಚ್‌.ವಾಯ್‌. ಬಾಲದಂಡಿ, ಡಾ. ಭಾರತಿ ಕೋಣಿ, ರಮೇಶ ಚೌಗಲಾ, ವಿರುಪಾಕ್ಷ ತಿಳಗಂಜಿ, ಜಗದೀಶ ಪೂಜೇರಿ, ನಿಂಗಪ್ಪ ಸಿಂಗೋಟಿ, ಬಸಲಿಂಗಪ್ಪ ಮುಂಡರಗಿ, ಪುಂಡಲೀಕ ಕೋಟಿನತೋಟ, ರಾಯಪ್ಪ ಬನ್ನಕ್ಕಗೋಳ, ಶಿವಮಲ್ಲಪ್ಪ ಕುಳಲಿ, ಬಸಪ್ಪ ಮುಂಗರವಾಡಿ, ಮಹಾದೇವ ಹೂಗಾರ, ಎಂ.ಬಿ. ಶೇಗುಣಸಿ, ಮೂಡಲಗಿ ತಾಲೂಕು ಮಾಜಿ ಸೈನಿಕರ ಸಂಘದ ನಿರ್ದೇಶಕರಾದ ಮಲ್ಲಪ್ಪ ಸಾಯನ್ನವರ, ಮಹಾಲಿಂಗ ಬಬಲಿ, ರಾಜಪ್ಪ ದಬಾಡಿ, ಭೀಮಪ್ಪ ಪಾಟೀಲ, ನಾಮದೇವ ಸಂಗಾನಟ್ಟಿ, ಪಾಂಡಪ್ಪ ಕೊಪ್ಪದ, ಸುರೇಶ ಅಂಗಡಿ, ರಾಮಪ್ಪ ಮುಗಳಖೋಡ, ಅನಿತಾ ಮಿರ್ಜಿ, ಸೇರಿದಂತೆ ಅನೇಕ ಮಾಜಿ ಸೆ„ನಿಕರ ಸಂಘದ ಸದಸ್ಯರು, ವೀರ ನಾರಿಯರು ಉಪಸ್ಥಿತರಿದ್ದರು.ಚರಂತಯ್ನಾ ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತಾಜಿ ಸುಭಾಶ್ಚಂದ್ರ ಬೋಸ್‌ ಜಯಂತಿ ನಿಮಿತ್ತ ಬಾಲಚಂದ್ರ ಜಾರಕಿಹೊಳಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next