ಮುದಗಲ್ಲ: ಸಮೀಪದ ಹಡಗಲಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮೂರು ದಿನಗಳವರೆಗೆ ಅದ್ಧೂರಿಯಾಗಿ ನಡೆಯಿತು.
ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಗರ್ಭಗುಡಿಯಲ್ಲಿ ವಿಶೇಷ ಪೂಜೆ, ಪೂಜಾರಿ ಹೇಳಿಕೆ ಕಾರ್ಯಕ್ರಮ ನಡೆಯಿತು.
ಮಂಗಳವಾರ ಬೆಳಗಿನ ಜಾವ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಕಳಸರೋಹಣ ಮತ್ತು ವಿಶೇಷ ಪೂಜೆ ನಡೆದವು. ಹಡಗಲಿ ಮತ್ತು ಸುತ್ತಲಿನ ಗ್ರಾಮಗಳಾದ ನಾಗಲಾಪುರ, ದೇಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ತಿಮ್ಮಾಪುರ, ತಲೇಖಾನ್ ಸೇರಿ ವಿವಿಧ ತಾಂಡಾ, ಗ್ರಾಮ, ಮುದಗಲ್ಲ ಪಟ್ಟಣ ಸೇರಿ ಆಂಧ್ರದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಗೆ ಕಾಯಿ, ಕರ್ಪೂರ ಅರ್ಪಿಸಿ ಉಡಿ ತುಂಬಿದರು. ಹರಕೆ ಹೊತ್ತ ಉರಳು ಸೇವೆ ಸಲ್ಲಿಸಿದರು.
ಬುಧವಾರ ಬೆಳಗಿನ ಜಾವ ಪೂಜಾರಿಗಳಿಂದ ಆಗ್ನಿಕುಂಡ ಹಾಯುವ ಹಾಗೂ ಅಕ್ಕಿಪಾಯಸ ತಗೆಯುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು.
ಹಡಗಲಿ ತಾಪಂ ಕ್ಷೇತ್ರ ಸದಸ್ಯೆ ಶಾರದಾ ದೇವಪ್ಪ ರಾಠೊಡ, ಪಿಕಾರ್ಡ್ ಬ್ಯಾಂಕ ಮಾಜಿ ನಿರ್ದೇಶಕ ಶಂಭುಲಿಂಗಪ್ಪ ವಿಟ್ಲಾಪುರ, ಉತ್ತರ ಕರ್ನಾಟಕ ಬಂಜಾರ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಗ್ರಾಪಂ ಸದಸ್ಯರಾದ ವೆಂಕನಗೌಡ ಪೊಲೀಸ್ ಪಾಟೀಲ, ಪಿಕೆಪ್ಪ ನಾಯ್ಕ, ಮಾನಮ್ಮ ಬಾಲಚಂದ್ರ, ಶಂಕ್ರಮ್ಮ ಮಾನಪ್ಪ, ಮಾಜಿ ಸದಸ್ಯರಾದ ದುರುಗಪ್ಪ ಕಟ್ಟಮನಿ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪ್ರಾಣಿ ಬಲಿ: ಗ್ರಾಮದೇವೆಯ ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸಲು ದೇವತೆ ಹೆಸರಿನಲ್ಲಿ ನೂರಾರು ಕುರಿ ಬಲಿ ನೀಡಿದರು.