Advertisement

ಸವಳು-ಜವಳಲ್ಲಿ ಬಂಪರ್‌ ಬೆಳೆ

12:14 PM Jan 25, 2020 | Naveen |

ಮುದಗಲ್ಲ: ಮಳೆ ಕೊರತೆ, ಮಾರುಕಟ್ಟೆ ಸಮಸ್ಯೆ ಹಾಗೂ ಹಳೆ ಪದ್ಧತಿ ಸೇರಿ ಹಲವು ಕಾರಣಗಳಿಂದಾಗಿ ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ನಡುವೆ ಬಳ್ಳಾರಿ ಮೂಲದ ಜಗದೀಶ ಕುರಗೋಡ ಎಂಬ ರೈತ ಯರದೊಡ್ಡಿಯಲ್ಲಿ 12 ಎಕರೆ ಸವಳು, ಜವಳು ಭೂಮಿಯನ್ನು ಲೀಜ್‌ಗೆ ಪಡೆದು ದಾಳಿಂಬೆ ಬೆಳೆದು ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ.

Advertisement

ತಲೇಖಾನ ಗ್ರಾಪಂ ವ್ಯಾಪ್ತಿಯ ಯರದೊಡ್ಡಿ ಗ್ರಾಮದಲ್ಲಿ ಸುಮಾರು 30 ಎಕರೆ ಸವಳು-ಜವಳು ಜಮೀನು ಲೀಜ್‌ಗೆ ಪಡೆದ ಯುವ ರೈತ ಜಗದೀಶ ಕುರಗೋಡ ದಾಳಿಂಬೆ ಬೆಳೆಯುತ್ತಿದ್ದಾರೆ. ಈ ಸವಳು-ಜವಳು ಜಮೀನನ್ನು 10 ವರ್ಷದ ಅವಧಿಗೆ ಲೀಜ್‌ಗೆ ಪಡೆದಿದ್ದೇನೆ. ಜಮೀನು ಮಾಲೀಕ ಎನ್‌. ವೆಂಕಟರಾವ್‌ ಅವರಿಗೆ ಮೊದಲ 5 ವರ್ಷ ಪ್ರತಿ ವರ್ಷ 1.5 ಲಕ್ಷ ರೂ. ನಂತರದ 5 ವರ್ಷ 2.5 ಲಕ್ಷ ರೂ.ದಂತೆ ನೀಡಬೇಕು. 2018-19ರಲ್ಲಿ ಅಂದಾಜು 10 ಲಕ್ಷ ರೂ. 2019-20ರಲ್ಲಿ 13 ಲಕ್ಷ ರೂ. ಲಾಭವಾಗಿದೆ. 6 ಎಕರೆಯಲ್ಲಿ ಕಳೆದ ಎರಡು ವರ್ಷದಿಂದ ಫಸಲು ಕೈ ಸೇರುತ್ತಿದೆ.

ಇನ್ನು 6 ಎಕರೆಯಲ್ಲಿ ಬೆಳೆದ ದಾಳಿಂಬೆ ಫಸಲು ಮುಂದಿನ ವರ್ಷದಿಂದ ಕೈ ಸೇರುತ್ತಿದೆ ಎಂದು ರೈತ ಜಗದೀಶ ವಿವರಿಸಿದರು. ಈ ಜಮೀನಿನಲ್ಲಿ ನಾಲ್ಕೈದು ಜನ ರೈತರು ಕೃಷಿ ಮಾಡಿ ನಷ್ಟ ಅನುಭವಿಸಿದ್ದಾರೆ. ಆದರೆ ನಾನು ಕೃಷಿಗೆ ಕೈ ಹಾಕಿದಾಗಿನಿಂದ ನಷ್ಟವಾಗಿಲ್ಲ. ಮೊದಲಿಗೆ ಆರು ಕೊಳವೆಬಾವಿ ಕೊರೆಸಿದ್ದೆ. ಅದರಲ್ಲಿ 4 ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗಿದೆ. ಈ ಕೊಳವೆಬಾವಿಗಳ ನೀರನ್ನೇ ಬಳಸುತ್ತಿದ್ದೇನೆ. ಬಳ್ಳಾರಿಯ ತೋಟಗಾರಿಕೆ ಬೆಳೆ ತಜ್ಞ ಡಾ|ಶ್ರೀನಿವಾಸ ರಾಜು ಮಾರ್ಗದರ್ಶನದಲ್ಲಿ ದಾಳಿಂಬೆ ಸಸಿಗಳನ್ನು ಖರೀದಿಸಿ ನಾಟಿ ಮಾಡಿ ಪಾಲನೆ-ಪೋಷಣೆ ಮಾಡಿದ 3 ವರ್ಷದ ಬಳಿಕ ದಾಳಿಂಬೆ ಫಸಲು ಕೈಸೇರಿದೆ. ಇದಕ್ಕೆ ಜೈವಿಕ ಗೊಬ್ಬರ, ಸಾವಯವ ಗೊಬ್ಬರ ಸೇರಿ ಔಷಧ ಸಿಂಪಡಣೆಗೆ ತೋಟಗಾರಿಕೆ ತಜ್ಞ ಡಾ|ಶ್ರೀನಿವಾಸರಾಜು ಮಾರ್ಗದರ್ಶನ ನೀಡುತ್ತಿದ್ದು, ಪ್ರತಿ ತಿಂಗಳು ತೋಟಕ್ಕೆ ಭೇಟಿ ನೀಡಿ ಸಲಹೆ ನೀಡಿದ್ದಾರೆ ಎಂದು ರೈತ ಜಗದೀಶ ಹೇಳಿದರು.

„ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next