Advertisement
ದಿಲ್ಲಿಯಲ್ಲಿ ರಾಜ್ಯಪಾಲರ ಸಮ್ಮೇಳನ ದಲ್ಲಿ ಭಾಗಿಯಾಗಲು ತೆರಳಿದ್ದ ಅವರು ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿದ್ದು, ಅಭಿಯೋಜನೆಗೆ ಸಮ್ಮತಿ ನೀಡುವುದರಿಂದ ಆಗುವ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೂಂದು ಶೋಕಾಸ್ ನೋಟಿಸ್ ನೀಡುವ ಸಾಧ್ಯತೆಯೂ ಇದೆ. ಈ ಹಿಂದೆ ನೀಡಿದ ನೋಟಿಸ್‌ನ ವಿರುದ್ಧವಾಗಿ ಮಂತ್ರಿ ಪರಿಷತ್ ಸಭೆ ತೆಗೆದುಕೊಂಡ ನಿರ್ಣಯವೇ ಕಾನೂನುಬಾಹಿರ ಎಂದು ರಾಜ್ಯಪಾಲರು ವಾದಿಸುವ ಸಾಧ್ಯತೆ ಇದೆ. ಅದಾದ ಬಳಿಕ ಸರಕಾರದ ನಡೆ ಆಧರಿಸಿ ಅಭಿಯೋಜನೆಗೆ ಒಪ್ಪಿಗೆ ನೀಡಬಹುದು ಎನ್ನಲಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಅಭಿಯೋಜನೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ರಾಜ್ಯಪಾಲರ ವಿವೇಚನಾಧಿಕಾರವನ್ನು ಪ್ರಶ್ನಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಕರಣದ ಸತ್ಯಾಸತ್ಯ ಆಧರಿಸಿ ನ್ಯಾಯಾಲಯದಲ್ಲಿ ಇದಕ್ಕೆ ತಡೆ ಕೋರಿ ಕಾನೂನು ಹೋರಾಟ ನಡೆಸಬಹುದೇ ವಿನಾ ಸಂವಿಧಾನಾತ್ಮಕವಾಗಿ ರಾಜ್ಯಪಾಲರ ಈ ವಿವೇಚನಾಧಿಕಾರವನ್ನು ಪ್ರಶ್ನಿಸುವುದು ಸರಕಾರದ ಕಡೆಯಿಂದ ಕಾಲಹರಣದ ತಂತ್ರ ಎಂದೇ ಕಾನೂನು ತಜ್ಞರು ವ್ಯಾಖ್ಯಾನಿಸಲಾರಂಭಿಸಿದ್ದಾರೆ.
Related Articles
ಕಾನೂನು ತಜ್ಞರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಷ್ಟೇ ರಾಜ್ಯಪಾಲರು ಅಭಿಯೋಜನೆಗೆ ಅಂಗೀಕಾರ ನೀಡಿದರೆ ಆಗ ಅವರು ವೈಯಕ್ತಿಕವಾಗಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಸರಕಾರ ಇದರ ಭಾಗವಾಗುವುದಕ್ಕೆ ಸಾಧ್ಯವಿಲ್ಲ. ಒಟ್ಟಾರೆಯಾಗಿ ಏಕಾಂಗಿಯಾಗಿ ಸಿದ್ದರಾಮಯ್ಯ ತಮ್ಮನ್ನು ಕಾನೂನು ಹೋರಾಟಕ್ಕೆ ಒಡ್ಡಿಕೊಳ್ಳಬೇಕಾಗುತ್ತದೆ. ಸರಕಾರದ ಮೂಲಗಳ ಪ್ರಕಾರ ಸಿದ್ದರಾಮಯ್ಯನವರು ರಾಜಭವನದ ನಡೆ ಆಧರಿಸಿ ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲೇ ಸಮರಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚಿದೆ.
Advertisement
ರಾಜ್ಯಪಾಲರ ವಿವೇಚನಾಧಿಕಾರ ಸಚಿವ ಸಂಪುಟದ ನಿರ್ಣಯವನ್ನೇ ಆಧರಿಸಿರಬೇಕೆಂದಿಲ್ಲ. ಸಂಪುಟದ ಅನು ಮತಿ ಇಲ್ಲದೆ ರಾಜ್ಯಪಾಲರು ಪ್ರವರ್ತಿಸು ವುದಕ್ಕೆ ಅನೇಕ ಕಾರಣಗಳಿವೆ. ಆದರೆ ಅಭಿ ಯೋಜನೆಯನ್ನು ಪ್ರಶ್ನಿಸುವ ಹಕ್ಕು ಸಿಎಂಗೆ ಇದೆ.-ಅಶೋಕ್ ಹಾರ್ನಹಳ್ಳಿ,ಮಾಜಿ ಅಡ್ವೊಕೇಟ್ ಜನರಲ್
ಅಭಿಯೋಜನೆಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ರಾಜ್ಯಪಾಲರ ವಿವೇಚಾನಾಧಿಕಾರವನ್ನು ಪ್ರಶ್ನಿಸುವುದಕ್ಕೆ ಸಾಧ್ಯವೇ ಇಲ್ಲ. ಮುಖ್ಯ ಮಂತ್ರಿ ವಿರುದ್ಧ ದೂರು ಬಂದಾಗ ಅದರ ಬಗ್ಗೆ ವಿಚಾರಣೆ ಅಥವಾ ಅಭಿಯೋಜನೆಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ.-ಸಿ.ಎಚ್. ಹನುಮಂತರಾಯ, ಹಿರಿಯ ನ್ಯಾಯವಾದಿ