Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ್ದು ಎನ್ನಲಾದ ಮೈಸೂರಿನ ಕೆಸರೆ ಬಳಿ ಇರುವ ಸರ್ವೇ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ನಮ್ಮ ಒಪ್ಪಿಗೆ ಇಲ್ಲದೆ, ನಮ್ಮ ಚಿಕ್ಕಪ್ಪ ದೇವರಾಜು ನಮ್ಮ ಗಮನಕ್ಕೆ ತರದೆ ಸಿಎಂ ಪತ್ನಿಯ ಸಂಬಂಧಿಕರಿಗೆ ಮಾರಾಟ ಮಾಡಿದ್ದಾರೆ ಎಂದು ಭೂಮಿಯ ಮೂಲ ವಾರಸುದಾರರು ಎನ್ನ ಲಾದ ಜವರಯ್ಯ ಹಾಗೂ ಮಂಜುನಾಥ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ರೂ. ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು ಈ ಸಂಬಂಧ ಹೋರಾಟವನ್ನು ಮುಂದು ವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಶನಿವಾರ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕುಟುಂಬಕ್ಕೆ ಜಮೀನು ಮಾರಾಟ ಮಾಡಿದ್ದರು ಎನ್ನಲಾದ ಮೂಲ ಮಾಲಕರ ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Related Articles
Advertisement
ಈ ವೇಳೆ ಮಾತನಾಡಿದ ಮಾಜಿ ಸಚಿವ ಎನ್. ಮಹೇಶ್, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕುಟುಂಬಸ್ಥರು ಖರೀದಿಸಿ¨ªಾರೆ ಎನ್ನಲಾಗಿರುವ ಸದರಿ ಜಮೀನು ಜವರ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಜವರನಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದು, ಇವರಲ್ಲಿ ಈ ಜಮೀನನ್ನು ದೇವರಾಜ ಒಬ್ಬನೇ ಮಾರಾಟ ಮಾಡಿದ್ದಾರೆ. ಆದರೆ ಇದರಲ್ಲಿ ಆತನ ಸಹೋದರರಾದ ಮಲ್ಲಯ್ಯ ಮತ್ತು ಮೈಲಾರಯ್ಯ ಅವರಿಗೂ ಪಾಲು ಸಿಗಬೇಕಿತ್ತು. ಈ ನಿಟ್ಟಿನಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕುಟುಂಬಸ್ಥರು ಮನವಿ ಕೊಟ್ಟಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿ ಎಂದಿದ್ದೇನೆ ಎಂದರು.
ದೇವರಾಜು ಜಮೀನು ಮಾರಾಟ ಮಾಡುವಾಗ ಜಮೀನಿನ ಇತರ ವಾರಸುದಾರರ ಮಲ್ಲಯ್ಯ ಮತ್ತು ಮೈಲಾರಯ್ಯ ಸಹಿ ಹಾಗೂ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಇದಾವುದನ್ನೂ ಮಾಡದೆ ಒಬ್ಬನೇ ಜಮೀನಿನ ಲಾಭ ಪಡೆದುಕೊಂಡಿದ್ದಾನೆ. ಆದ್ದರಿಂದ ಉಳಿದ ಇಬ್ಬರಿಗೂ ಪಾಲು ದೊರೆಯಬೇಕು ಎಂಬುದು ನಮ್ಮ ವಾದ. ದಲಿತರ ಜಮೀನನ್ನು ಸಿದ್ದರಾಮಯ್ಯ ಖರೀದಿ ಮಾಡಬಾರದು ಎಂದೇನಿಲ್ಲ. ಆದರೆ ಸ್ವಯಾರ್ಜಿತ ಆಸ್ತಿಯನ್ನು ಖರೀದಿ ಮಾಡಬಹುದಾಗಿದೆ ಎಂದ ಅವರು, ಮುಡಾ ಹಗರಣದ ಕುರಿತಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಆದರೆ ಈ ತನಿಖೆಯನ್ನು ಸಿಬಿಐ ಮೂಲಕ ನಡೆಯಬೇಕೆಂದು ಆಗ್ರಹಿಸಿದರು.