Advertisement

ಮುಡಾದಿಂದ 100 ಕೋಟಿ ರೂ. ಸ್ವತ್ತು ಸ್ವಾಧೀನ

01:20 PM Dec 19, 2021 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತನಗೆ ಸೇರಿದ ಸುಮಾರು ಒಂದು ನೂರು ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಶನಿವಾರ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.

Advertisement

ಮೈಸೂರು ತಾಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದಲ್ಲಿ 5.14 ಎಕರೆ ತನ್ನಜಾಗವನ್ನು ಪ್ರಾಧಿಕಾರ ವಶಕ್ಕೆ ಪಡೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ 1991ರಲ್ಲಿಯೇ ಈ ಜಾಗವನ್ನು ಭೂ ಸ್ವಾಧೀನಪಡಿಸಿಕೊಂಡು ಭೂ ಮಾಲಿಕರಿಗೆ ಪರಿಹಾರವನ್ನೂ ನೀಡಿತ್ತು. ಈ ಸ್ವತ್ತನ್ನು ಭೂ ಮಾಲಿಕರಿಂದ ಕ್ರಯ ಒಪ್ಪಂದ ಮಾಡಿಕೊಂಡ ಮಹದೇವಯ್ಯ ಎಂಬುವರು ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಪ್ರಾಧಿಕಾರದ ಪರ ತೀರ್ಪು ಬಂದಿದೆ.

ನ್ಯಾಯಾಲಯದ ಆದೇಶದ ಅನುಸಾರ, ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಪೊಲೀಸ್‌ರಕ್ಷಣೆಯಲ್ಲಿ ಸ್ಥಳಕ್ಕೆ ತೆರಳಿ ಈ ಜಾಗದಲ್ಲಿದ್ದ 2 ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿದ್ದಾರೆ.ಜಾಗವನ್ನು ಪ್ರಾಧಿಕಾರದ ವಶಕ್ಕೆ ಪಡೆದಿದ್ದಾರೆ. ಈ ಜಾಗದಲ್ಲಿ 50-80 ಅಳತೆಯ 11 ನಿವೇಶನಗಳು,40-60 ಅಳತೆಯ 36 ನಿವೇಶನಗಳು ರಚನೆಯಾಗಲಿವೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಡಿ.ಬಿ.ನಟೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಧಿಕಾರ ಆಯುಕ್ತ ಡಾ. ಡಿ.ಬಿ.ನಟೇಶ್‌, ಸೂಪರಿಂಟೆಂಡೆಂಟ್‌ ಎಂಜಿನಿಯರುಗಳಾದ ಶಂಕರ್‌, ಭೂ ಸ್ವಾಧೀನಾಧಿಕಾರಿ ಹರ್ಷವರ್ಧನ್‌, ಎಕ್ಸಿಕ್ಯೂಟಿವ್‌ ಎಂಜಿನಿಯರುಗಳಾದ ಮೋಹನ್‌,ಸತ್ಯನಾರಾಯಣ ಜೋಶಿ, ವಲಯಾಧಿಕಾರಿಗಳಾದ ಕೆ.ಆರ್‌.ಮಹೇಶ್‌, ರವೀಂದ್ರಕುಮಾರ್‌, ಕಿರಣ್‌,ಶಿವಣ್ಣ, ನಾಗೇಶ್‌,ರವಿಶಂಕರ್‌, ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next