Advertisement
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಈ ಪ್ರಶ್ನೆ ಎತ್ತಿದರು. ಹಿಂದೆ ಸಿದ್ದರಾಮಯ್ಯ ಅವರ ಮೇಲೆ ರೀ ಡೂ ಆರೋಪ ಬಂದಾಗ ಅದರ ತನಿಖೆಗೆ ನೇಮಿಸಿದ್ದ ನ್ಯಾ.ಕೆಂಪಣ್ಣ ಆಯೋಗದ ವರದಿ ಎಲ್ಲಿ ಹೋಯಿತು? ರೀ ಡೂ ಪ್ರಕರಣಕ್ಕಿಂತಲೂ ಹೆಚ್ಚಿನ ಬಲವಾದ ಸಾಕ್ಷ್ಯಗಳು ಈ ಪ್ರಕರಣದಲ್ಲಿವೆ. ಮುಖ್ಯಮಂತ್ರಿಗಳು ತಾವು ತಪ್ಪೇ ಮಾಡಿಲ್ಲ, ನಮಗೆ ಮುಡಾದವರೇ 62 ಕೋಟಿ ರೂ. ಕೊಡಬೇಕು ಎಂಬುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಈ ಹಗರಣ ನನಗೆ ಕಳೆದ ವರ್ಷವೇ ಗಮನಕ್ಕೆ ಬಂದಿತ್ತು ಎಂದು ಕುಮಾರಸ್ವಾಮಿ ಹೇಳಿದರು.
“ನನ್ನ ಬಗ್ಗೆ ಯಾರೋ ಒಬ್ಬರು ಹುಚ್ಚ ಅಂದಿದ್ದಾರಲ್ಲ, ನಾನು ಯಾವುದೋ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುವ ಆವಶ್ಯಕತೆ ಇಲ್ಲ. ಈಗಾಗಲೇ ಹೃದಯ ಚಿಕಿತ್ಸೆ ಪಡೆದು ಬಂದಿದ್ದೇನೆ, ನಾನು ಚೆನ್ನಾಗಿಯೇ ಇದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. 2013ರಲ್ಲಿ ಘೋಷಣೆ ಮಾಡಿದ್ದೀರಾ: ಸಿಎಂಗೆ ಪ್ರಶ್ನೆ
ಮುಡಾ ಹಗರಣದ ಬಗ್ಗೆ ಜಿ.ಟಿ. ದೇವೇಗೌಡರನ್ನು ಕೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮುಡಾದ ದಾಖಲೆಗಳು ಬೀದಿ ಬೀದಿಯಲ್ಲಿ ರವಾನೆ ಆಗುತ್ತಿವೆ. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ನನ್ನ ಜಮೀನು, ಹೇಳದೆ ಕೇಳದೆ ಸೈಟ್ ಮಾಡಿಬಿಟ್ಟಿದ್ದೀರಿ ಎಂದು ಅವರು ಹೇಳುತ್ತಿದ್ದಾರೆ. ಆ ಜಮೀನಿನ ವಾರಸುದಾರರು ಯಾರು? ಯಾರ ಹೆಸರಿನಲ್ಲಿ ಜಮೀನು ಇದೆ? ಲಿಂಗ ಅಲಿಯಾಸ್ ಜವರ ಅನ್ನುವವರ ಜಮೀನು ಅದು. ಈಗಾಗಲೇ ಆ ದಾಖಲೆಗಳನ್ನು ಎಲ್ಲೆಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆ. 2004ರಲ್ಲಿ ಏನಾಯಿತು? 2005ರಲ್ಲಿ ಏನಾಯಿತು? ಎಲ್ಲದರ ಇತಿಹಾಸವೂ ನನ್ನ ಬಳಿ ಇದೆ. ತಮ್ಮ ಧರ್ಮಪತ್ನಿಗೆ ಅವರ ಅಣ್ಣ ನೀಡಿದ ಅರಿಶಿನ ಕುಂಕುಮದ ಜಮೀನು ಅದು ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರಲ್ಲ, 2013ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಈ ಆಸ್ತಿಯ ಬಗ್ಗೆ ಘೋಷಣೆ ಮಾಡಿಕೊಂಡಿ¨ªಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.