Advertisement
ವಿಶ್ವನಾಥ್ ತಮ್ಮ ಪತ್ನಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದಿರುವ ಕುರಿತು ಮುಡಾ ಅಧ್ಯಕ್ಷ ಮರೀಗೌಡ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ನಿವೇಶನ ಜಾಗದಲ್ಲಿ ನಾಲೆ ಹಾದುಹೋಗಿದ್ದು, ಬದಲಿ ನಿವೇಶನ ನೀಡಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕಾಂಗ್ರೆಸ್ ಶಾಸಕರು ಮುಡಾ ಹಗರಣದ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ನಾನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಳಿ ನಿವೇ ಶನ ಕೇಳಿದ್ದು ನಿಜ. ಆದರೆ ನನಗಾಗಿ ಅಲ್ಲ; ಸ್ನೇಹಿತರಿಗೆ ನೀಡುವಂತೆ ಅವರ ಬಳಿ ಹೋಗಿದ್ದು ನಿಜ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಾನು ಮುಡಾ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೆ. ನಿವೇಶನ ಸಿಕ್ಕಿದೆ. ಜತೆಗೆ 2 ಬಾರಿ ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ನಾಗಿದ್ದೆ. ಹಾಗಿರುವಾಗ ಬೈರತಿ ಬಳಿ ನಿವೇಶನವನ್ನು ನಾನೇಕೆ ಕೇಳಲಿ? ಆತ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವುದರಿಂದ ಸ್ನೇಹಿತರಿಗೆ ನಿವೇಶನ ನೀಡುವಂತೆ ಕೇಳಲು ಹೋಗಿದ್ದೆ ಎಂದರು.