Advertisement
ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾತ್ರವಲ್ಲದೆ ಒಟ್ಟು 700 ಕೋಟಿ ರೂ. ಮೌಲ್ಯದ ಇನ್ನೂ 1,095 ಸೈಟುಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮವಾಗಿ ಮಂಜೂರು ಮಾಡಿದೆ ಎಂದು ತಿಳಿಸಿದೆ ಎಂಬುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.ಪಾರ್ವತಿ ಅವರಿಗೆ ಮಂಜೂರಾದ 14 ಸೈಟ್ವರ್ಗಾವಣೆ ಸಂಬಂಧಿಸಿ ಹಲವು ಅಕ್ರಮಗಳು ನಡೆದಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ.
Related Articles
Advertisement
ಜತೆಗೆ ಸ್ಥಳೀಯ ಪ್ರದೇಶದ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಸರ್ವೇಯರ್, ಕಂದಾಯ ನಿರೀಕ್ಷಕರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ್ದರೂ ಸ್ಥಳದಲ್ಲಿ ಮುಡಾ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದನ್ನು ಮಾತ್ರ ನಮೂದಿಸಿಲ್ಲ. ಬದಲಿಗೆ ಸ್ಥಳದಲ್ಲಿ ಯಾವುದೇ ಅಕ್ರಮ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ವರದಿ ಮಾಡಿದ್ದಾರೆ. ಆದರೆ ಇದು, ಪ್ರದೇಶಕ್ಕೆ ಸಂಬಂಧಿಸಿ ಉಪಗ್ರಹ ಚಿತ್ರಗಳು ತಿಳಿಸುವ ಸತ್ಯಕ್ಕೆ ಹಾಗೂ ಮುಡಾ ದಾಖಲೆಗಳಿಗೆ ದೂರವಾಗಿದೆ ಎಂದೂ ಇ.ಡಿ. ನಮೂದಿಸಿದೆ ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಪತ್ರದಲ್ಲಿ ಏನಿದೆ?*ಸಿಎಂ ಪತ್ನಿ ಸೈಟ್ ಬಿಟ್ಟು 700 ಕೋ. ರೂ. ಮೌಲ್ಯದ ಇನ್ನೂ 1,095 ಸೈಟ್ ಅಕ್ರಮವಾಗಿ ಮಂಜೂರು
* ನಿವೇಶನ ಮಂಜೂರು ಪ್ರಕ್ರಿಯೆಯಲ್ಲಿ ಶಾಸನಬದ್ಧ ಮಾರ್ಗಸೂಚಿ, ಕಚೇರಿ ಪ್ರಕ್ರಿಯೆಗಳ ಉಲ್ಲಂಘನೆ
* ಅಧಿಕಾರಿಗಳ ಅನಗತ್ಯ ಒಲವು, ಪೋರ್ಜರಿಗೆ ಸಾಕ್ಷ್ಯ ಲಭ್ಯ
* 1,095 ಸೈಟ್ ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಮಂಜೂರು ಇ.ಡಿ. ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಜರು
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಐಎಎಸ್ ಅಧಿಕಾರಿ ದೀಪಾ ಚೋಳನ್ ಮಂಗಳವಾರ ದಾಖಲೆಗಳ ಸಮೇತ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಹಾಜರಾಗಿದ್ದು, ಸತತ 8 ತಾಸು ಅವರನ್ನು ವಿಚಾರಣೆ ನಡೆಸಲಾಗಿದೆ.