Advertisement

MUDA Scam: ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ: ಮೈತ್ರಿ ನಾಯಕರ ಗುಡುಗು

01:22 AM Aug 20, 2024 | Team Udayavani |

ಬೆಂಗಳೂರು: ಮುಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷಗಳು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮೊರೆಯಿಡುವ ಎಚ್ಚರಿಕೆಯನ್ನೂ ನೀಡಿವೆ.

Advertisement

ಸಿಎಂ ವಿರುದ್ಧ “ಮೈಸೂರು ಚಲೋ’ ನಡೆಸಿದ್ದ ಮಿತ್ರಪಕ್ಷಗಳು, ಮತ್ತೂಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದು, ಅದರ ಭಾಗವಾಗಿ ಸೋಮವಾರ ವಿಧಾನಸೌಧ ಹಾಗೂ ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಜಂಟಿ ಪ್ರತಿಭಟನೆ ನಡೆಸಿದವು.

ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೂ ರಾಜೀನಾಮೆ ಕೊಡುವು ದಿಲ್ಲ ಎನ್ನುತ್ತಿರುವ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಿಎಂ ರಾಜೀ ನಾಮೆ ಕೊಡುವವರೆಗೂ ಬಿಡುವು ದಿಲ್ಲ ಎಂದೂ ಘೋಷಿಸಿದರು.

ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡ ಮೈತ್ರಿ ನಾಯಕರು, ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ನಡೆಯನ್ನು ಖಂಡಿಸಿದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದೇ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷವೇ ಕಾನೂನುಭಂಗಕ್ಕೆ ಕುಮ್ಮಕ್ಕು ಕೊಡುತ್ತಿದೆ. ಇಂತಹ ಸರಕಾರ ಇರು ವುದಕ್ಕಿಂತ ರಾಷ್ಟ್ರಪತಿ ಆಳ್ವಿಕೆ ಜಾರಿ ಗೊಳಿಸುವುದು ಕ್ಷೇಮ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಹಳೇ ಆಡಿಯೋ ಆಲಿಕೆ
ಈ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿದ್ದಂತೆ ಅಂದು ವಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಭಾಷಣ ಮಾಡಿದ್ದನ್ನು ಕೇಳಿಸಲಾಯಿತು. ಪ್ರದರ್ಶಿಸಲಾಯಿತು. “ಯಡಿಯೂರಪ್ಪ ಅವರೇ, ನಿಮ್ಮ ವಿರುದ್ಧ ಆರೋಪ ಬಂದಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದಾರೆ. ಸಿಎಂ ಸ್ಥಾನದಲ್ಲಿ ಮುಂದುವರಿದರೆ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ತನಿಖೆ ನಡೆಯಲು ಅಸಾಧ್ಯ. ಹೀಗಾಗಿ ರಾಜೀನಾಮೆ ಕೊಡಬೇಕಾದ್ದು ನಿಮ್ಮ ನೈತಿಕ ಜವಾಬ್ದಾರಿ. ದೋಷಮುಕ್ತ ಆಗಿ ಬಂದ ಮೇಲೆ ನಮ್ಮದೇನೂ ತಕರಾರಿಲ್ಲ’ ಎಂದಿದ್ದ ಭಾಷಣವನ್ನು ಪ್ರತಿಭಟನೆ ವೇಳೆ ಕೇಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next