Advertisement
ಸೋಮವಾರ ರಾತ್ರಿಯೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ದರು. ಬುಧವಾರ ಬೆಳಗ್ಗೆ 10ಕ್ಕೆ ಸಿಎಂ ಕಚೇರಿಯಿಂದ ಅಧಿಕೃತ ಪತ್ರಿಕಾಗೋಷ್ಠಿಯ ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ರದ್ದುಗೊಳಿಸಿದ ಅವರು 12ಕ್ಕೆ ತುರ್ತಾಗಿ ಬೆಂಗಳೂರಿಗೆ ಆಗಮಿಸಿದ್ದು, ಮಹತ್ವದ ಕಡತ ವಿಲೇವಾರಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 10ಕ್ಕೆ ಮತ್ತೆ ಮೈಸೂರಿಗೆ ತೆರಳಲಿದ್ದಾರೆ. ಅಧಿವೇಶನ ಪ್ರಾರಂಭವಾದಾಗಿನಿಂದ ಮಹತ್ವದ ಕಡತಗಳು ಬಾಕಿ ಇದ್ದವು. ಅವುಗಳ ವಿಲೇವಾರಿ ತುರ್ತಾಗಿ ನಡೆಸಬೇಕಿದ್ದರಿಂದ ಸಿದ್ದರಾಮಯ್ಯ ವಾಪಸ್ ಆಗಿದ್ದರು ಎಂದು ತಿಳಿದು ಬಂದಿದೆ.
ನಿಗೂಢ ನಡೆ
ಸಿದ್ದರಾಮಯ್ಯ ವಿರುದ್ಧ ಬಂದ ದೂರು ಆಧರಿಸಿ ಅಭಿಯೋಜನೆಗೆ ಅನುಮತಿ ನೀಡಬೇಕೋ, ಬೇಡವೋ ಎಂಬ ವಿಚಾರದಲ್ಲಿ ರಾಜಭವನದ ನಡೆ ಮಾತ್ರ ಇನ್ನೂ ನಿಗೂಢವಾಗಿದೆ. ರಾಜ್ಯಪಾಲರು ಕಾನೂನು ತಜ್ಞರ ಜತೆಗೂ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಏನೇ ಆದರೂಸಂಸತ್ ಕಲಾಪ ಮುಕ್ತಾಯವಾಗುವವರೆಗೆ ರಾಜಭವನ ಯಾವುದೇ ನಿರ್ಧಾರ ತೆಗೆದುಕೊಳ್ಳಲಾರದು ಎಂಬ ವಾದವೂ ಇದೆ.
ಹೊಸಪೇಟೆ: ಸಿಎಂ ವಿರುದ್ಧ ಮುಡಾ ಹಗರಣ ಸೃಷ್ಟಿಸಲಾಗಿದೆ. ರಾಜಭವನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ನೀಡಿದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು. ಪತ್ರಕರ್ತರ ಜತೆ ಮಾತನಾಡಿ, ಕೇಂದ್ರ ಸರಕಾರ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ. ಪ್ರಾಸಿಕ್ಯೂಶನ್ ನೀಡಲು ಈ ಪ್ರಕರಣದಲ್ಲಿ ಮೆಟಿರಿಯಲ್ ಇಲ್ಲ. ಒಂದು ವೇಳೆ ನೀಡಿದರೆ ರಾಜಕಾರಣ ಎಂಬುದು ಸಾಬೀತಾಗಲಿದೆ. ಇದಕ್ಕಾಗಿ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ. ಅಕ್ರಮವಾಗಿ ನಮ್ಮ ಜಮೀನು ಸ್ವಾ ಧೀನ ಮಾಡಿಕೊಳ್ಳಲಾಗಿದೆ ಎಂದು ಮುಡಾಕ್ಕೆ ಸಿಎಂ ಅವರ ಪತ್ನಿ ಕೇಳಿಕೊಂಡಿದ್ದಾರೆ. ಇದಕ್ಕಾಗಿ ಮುಡಾದಿಂದ ಸೈಟ್ ನೀಡಲಾಗಿದೆ ಎಂದರು.