Advertisement
ಜಿಲ್ಲಾ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾ ಧ್ಯಕ್ಷ ಮಂಜುನಾಥ ಭಂಡಾರಿ, ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಕಳಂಕ. ರಾಜ್ಯಪಾಲರ ಗೌರವಯುತ ಹುದ್ದೆಗೆ ಅವಮಾನ. ಕೇಂದ್ರ ಸರಕಾರವು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Related Articles
Advertisement
ತಪ್ಪೇ ಮಾಡದ ಸಿಎಂ ಸಿದ್ದರಾಮಯ್ಯ ಅವರನ್ನು ಮುಗಿಸುವ ಎಲ್ಲ ಕುತಂತ್ರಗಳೂ ವಿಫಲವಾಗಲಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ಷಡ್ಯಂತ್ರ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ಮೋದಿ ಸರಕಾರ ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ರಾಜ್ಯಪಾಲರ ಕಚೇರಿ ಈಗ ಬಿಜೆಪಿ ಕಚೇರಿ ಆಗಿದೆ. ಇದು ರಾಜ್ಯಪಾಲರು ಎಷ್ಟು ಕೆಳ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದರು. ಇದಕ್ಕೆಲ್ಲ ಸಿಎಂ ಅವರು ಜಗ್ಗುವುದಿಲ್ಲ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಜನರೂ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಹಿಂದೆ ಮಾಜಿ ಸಿಎಂ ಯಡಿಯೂ ರಪ್ಪ ವಿರುದ್ಧ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿತ್ತು. ಆದರೂ ಗವರ್ನರ್ ಆಗ ಬಹ ಳಷ್ಟು ಪರಾಮರ್ಶೆ ಮಾಡಿ ಪ್ರಾಸಿ ಕ್ಯೂಷನ್ ಅನುಮತಿ ಕೊಟ್ಟಿ ದ್ದರು. ಯಡಿಯೂರಪ್ಪರಿಗೂ ಸಿದ್ದರಾಮ ಯ್ಯರಿಗೂ ಹೋಲಿಕೆ ಮಾಡಲಾಗದು. ಯಡಿಯೂರಪ್ಪ ಒಬ್ಬ ಮಹಾಭ್ರಷ್ಟ, ಅವರು ಹಲವು ಕೇಸ್‌ಗಳಲ್ಲಿ ಇದ್ದಾರೆ ಎಂದರು. ಆಪರೇಷನ್ ಕಮಲಕ್ಕೆ ತಂತ್ರ: ಸೊರಕೆ ಆರೋಪ
ಉಡುಪಿ: ಆಪರೇಶನ್ ಕಮಲ ಮಾಡುವ ಪಿತೂರಿಯಿಂದ ಬಿಜೆಪಿಗರು ಸಿಎಂ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಭದ್ರ ಸರಕಾರವನ್ನು ಶಿಥಿಲಗೊಳಿಸುವ ಪ್ರಯತ್ನ ಕೇಂದ್ರದಿಂದ ಆಗುತ್ತಿದೆ. ಹಿಂದುಳಿದ, ಶೋಷಿತ, ಅಲ್ಪಸಂಖ್ಯಾಕರು ಸಿಎಂ ಸಿದ್ದರಾಮಯ್ಯ ಅವರ ಹಿಂದೆ ಇದ್ದಾರೆ. ಸಿಎಂ ಮೇಲೆ ಯಾವುದೇ ತಂತ್ರಗಾರಿಕೆ ನಡೆಯದು. ಅವರು ಎಂದೂ ಅಕ್ರಮ ರಾಜಕೀಯದಲ್ಲಿ ತೊಡಗಿದವರಲ್ಲ. ಈ ವಿಷಯದಲ್ಲಿ ಸಿಎಂ ಹಾಗೂ ಅವರ ಪತ್ನಿಯ ಹಸ್ತಕ್ಷೇಪ ಇಲ್ಲ ಎಂದರು. ಎಚ್.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ್ ರೆಡ್ಡಿಯವರ ಪ್ರಕರಣ ಯಾವ ಕಾರಣಕ್ಕೆ ಬಾಕಿ ಇದೆ? ದೇಶದಲ್ಲಿ ಎಲ್ಲೂ ಆಗದ ಪ್ರತಿಭಟನೆ ರಾಜ್ಯದಲ್ಲಿ ನಡೆಯುತ್ತದೆ. ಕಾಂಗ್ರೆಸ್‌ನಿಂದ 136 ಶಾಸಕರು ಗೆದ್ದಿದ್ದರೂ ಬಿಜೆಪಿಗರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಸಿಎಂ ಅವರನ್ನು ಪ್ರಶ್ನಿಸುವ ನೈತಿಕತೆ ಸುನಿಲ್ ಕುಮಾರ್ ಅವರಿಗೆ ಇಲ್ಲ. ಪರಶುರಾಮನ ಸೃಷ್ಟಿ ವಿಚಾರದಲ್ಲಿ ದೇವರಿಗೆ ಅವಮಾನ ಆಗಿದೆ ಎಂದರು. ರಾಜ್ಯಪಾಲರ ನಡೆ ಖಂಡನೀಯ: ಕೆ. ಅಭಯಚಂದ್ರ
ಮೂಡುಬಿದಿರೆ: ರಾಜ್ಯಪಾಲರ ನಡೆಯನ್ನು ಖಂಡಿಸಿರುವ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಕೆ. ಅಭಯಚಂದ್ರ, ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರ ಯೋಜನೆಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದ ರಾಜ್ಯಪಾಲರು ಈಗ ಕೇಂದ್ರ ಸರಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ. 2023ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರ ಇರುವಾಗ ಮುಡಾ ಸಿದ್ದರಾ ಮಯ್ಯನವರ ಪತ್ನಿಗೆ ಬದಲಿ ನಿವೇಶನ ನೀಡಿತ್ತು. ಇದರಲ್ಲಿ ಸಿಎಂ ಪಾತ್ರ ಇಲ್ಲ ಎಂದು ಅವರು ತಿಳಿಸಿದ್ದಾರೆ.