Advertisement

MUDA Scam: ಸಿಎಂ ಪ್ರಾಸಿಕ್ಯೂಶನ್‌: ರಾಜ್ಯಪಾಲರ ನಡೆ ನಿಗೂಢ

01:13 AM Aug 07, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿದ್ದ ರಾಜ್ಯಪಾಲರ ನಡೆ ಈಗ ನಿಗೂಢವಾಗಿದೆ.

Advertisement

ಈ ಪ್ರಕರಣದಲ್ಲಿ ಮುಂದೆ ಯಾವ ಕ್ರಮ ಜರಗಿಸಲಿದ್ದಾರೆ ಎಂಬ ಕುತೂಹಲವಂತೂ ಇದ್ದೇ ಇದೆ. ಈ ಮಧ್ಯೆ ಸದ್ಯಕ್ಕೆ ಮತ್ತೂಂದು ನೋಟಿಸ್‌ ನೀಡುವುದಾಗಲೀ ಅಥವಾ ಅಭಿಯೋಜನೆಗೆ ಅನುಮತಿಯನ್ನಾಗಲೀ ಕೊಡದೆ ಕಾದು ನೋಡಲಿದ್ದಾರೆ ಎನ್ನಲಾಗಿದೆ.
ಕಳೆದ 1 ವಾರದಿಂದ ದಿಲ್ಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರಚಂದ್‌ ಗೆಹೊÉàಟ್‌ ಸೋಮವಾರ ರಾತ್ರಿ ಬೆಂಗಳೂರಿಗೆ ಮರಳಿದ್ದು, ತಾವು ಕೊಟ್ಟಿದ್ದ ನೋಟಿಸ್‌ಗೆ ರಾಜ್ಯ ಮಂತ್ರಿ ಪರಿಷತ್‌ ಸಭೆಯ ಶಿಫಾರಸುಗಳು ಹಾಗೂ ಸಿಎಂ ಸಿದ್ದರಾಮಯ್ಯರ ಉತ್ತರವನ್ನು ಪರಿಶೀಲಿಸಿದ್ದಾರೆ.

ಪ್ರಮುಖವಾಗಿ ಇದೊಂದು ಸುಳ್ಳು ದೂರಾಗಿದ್ದು, ದೂರುದಾರರ ಮೇಲೆಯೇ ಸಾಕಷ್ಟು ಆರೋಪಗಳಿವೆ. ಹೀಗಾಗಿ ಶೋಕಾಸ್‌ ನೋಟಿಸ್‌ ಹಿಂಪಡೆಯಬೇಕು, ಅಭಿಯೋಜನೆಗೆ ಅನುಮತಿ ನೀಡಬಾರದೆಂದು ಮಂತ್ರಿ ಪರಿಷತ್‌ ಸಭೆ ನಿರ್ಣಯ ಕೈಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ನಿರ್ಣಯದ ಸಾರಾಂಶವನ್ನೇ ತಮ್ಮ ಉತ್ತರ ಎಂಬಂತೆ ರಾಜ್ಯಪಾಲರಿಗೆ ಕಳುಹಿಸಿದ್ದರು.
ಈ ನಡುವೆ ಮಂಗಳವಾರ ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿರುವ ದೂರುದಾರ ಅಬ್ರಹಾಂ, ತಮ್ಮ ವಿರುದ್ಧ ಮಂತ್ರಿ ಪರಿಷತ್‌ ಹೊರಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, ಸಿಎಂ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಮತ್ತೂಮ್ಮೆ ಮನವಿ ಮಾಡಿಕೊಂಡಿದ್ದಾರೆ.

ಸಾಲದ್ದಕ್ಕೆ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದು, ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿರುವುದಲ್ಲದೆ, ಜಿಲ್ಲಾಧಿಕಾರಿಯಿಂದ 15 ದಿನದಲ್ಲಿ ವರದಿ ಪಡೆದು ಸೂಕ್ತ ಕ್ರಮ ಜರಗಿಸುವಂತೆ ಕೋರಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ರಾಜ್ಯಪಾಲರು, ಮುಂದೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಕುತೂಹಲವಿದೆ.

ಕಾದು ನೋಡಲು ಅಬ್ರಹಾಂ ನಿರ್ಧಾರ
ಮುಡಾ ಹಗರಣದ ವಿಚಾರಣೆಗಾಗಿ ನ್ಯಾ| ದೇಸಾಯಿ ಅವರ ಆಯೋಗವನ್ನು ಸರಕಾರ ರಚಿಸಿದ್ದು, ರಾಜ್ಯಪಾಲರ ನಡೆಯನ್ನು ಕಾದು ನೋಡಲು ನಿರ್ಧರಿಸಿರುವ ದೂರುದಾರ ಅಬ್ರಹಾಂ, ಮುಂದಿನ ದಿನಗಳಲ್ಲಿ ಸಿಬಿಐ ಅಥವಾ ಲೋಕಾಯುಕ್ತ ತನಿಖೆಗೆ ಕೋರುವ ಬಗ್ಗೆ ಕಾನೂನು ಸಲಹೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡದಿದ್ದರೂ ನೇರವಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲು ಕೇಂದ್ರದ ಕಾಯ್ದೆಗಳಲ್ಲಿ ಅವಕಾಶಗಳಿವೆಯೇ ಎಂಬುದರ ಪರಿಶೀಲನೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next