Advertisement

Muda scam: 8 ಕಡೆ ಇ.ಡಿ. ಬೇಟೆ : 2 ಮಾಜಿ ಆಯುಕ್ತರು, ಸಿಎಂ ಆಪ್ತರ ಮನೆ ಗುರಿ

02:41 AM Oct 29, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಅಕ್ರಮ ಹಗರಣದಲ್ಲಿ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶ ನಾಲಯ (ಇ.ಡಿ.)ವು ಸೋಮವಾರ ಮುಡಾದ ಇಬ್ಬರು ಮಾಜಿ ಆಯುಕ್ತರ ಸಹಿತ ನಾಲ್ವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ-ಪತ್ರಗಳನ್ನು ವಶಕ್ಕೆ ಪಡೆದಿದೆ. ಬೆಂಗಳೂರು, ಮೈಸೂರಿ ನಲ್ಲಿ ತಲಾ 4 ಕಡೆ ದಾಳಿ ನಡೆಸಲಾಗಿದೆ.

Advertisement

ಮತ್ತೂಂದೆಡೆ ಪ್ರಕರಣ ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತ ಗಂಗರಾಜು ಹಾಗೂ ಜಮೀನಿನ ಮೂಲ ಮಾಲಕ ದೇವರಾಜು ಇ.ಡಿ. ಅಧಿಕಾರಿಗಳ ವಿಚಾ ರಣೆಗೆ ಹಾಜರಾಗಿದ್ದಾರೆ.

ಮುಡಾದ ಮಾಜಿ ಆಯುಕ್ತರಾದ ನಟೇಶ್‌, ದಿನೇಶ್‌ ಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಹಾಗೂ ಸಚಿವ ಭೈರತಿ ಸುರೇಶ್‌ ಅವರ ಪರಮಾಪ್ತನಾಗಿ ರು ವ ಬಿಲ್ಡರ್‌ ಮಂಜುನಾಥ್‌ ಹಾಗೂ ಮೈಸೂರಿನಲ್ಲಿ ಸಿಎಂ ಆಪ್ತ, ಜಿ.ಪಂ. ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಯಾರ ಮೇಲೆ ದಾಳಿ?
ಮುಡಾದ ಮಾಜಿ ಆಯುಕ್ತರಾದ ನಟೇಶ್‌, ದಿನೇಶ್‌ ಕುಮಾರ್‌, ಸಿಎಂ ಆಪ್ತರಾದ ಬಿಲ್ಡರ್‌ ಮಂಜುನಾಥ್‌, ಜಿ.ಪಂ. ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ ಅವರ ಮನೆ, ಕಚೇರಿ.

ದಿನೇಶ್‌ ಪರಾರಿ
ಬೆಂಗಳೂರಲ್ಲಿ ಮುಡಾದ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರ ಫ್ಲ್ಯಾಟ್‌ (ದೀಪಿಕಾ ಅಪಾ ರ್ಟ್‌ ಮೆಂಟ್‌) ಮೇಲೆ ಬೆಳಗ್ಗೆ 8ರ ಸುಮಾರಿಗೆ ಐವರು ಇ.ಡಿ. ಅಧಿಕಾರಿಗಳ ತಂಡವು ದಾಳಿ ನಡೆ ಸಿದ್ದು, ಈ ವಿಷಯ ತಿಳಿದು ದಿನೇಶ್‌ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

Advertisement

ಏಕಕಾಲಕ್ಕೆ ದಾಳಿ
ಇ.ಡಿ.ಯ ಬೆಂಗಳೂರು ಘಟಕದ ಹೆಚ್ಚುವರಿ ನಿರ್ದೇಶಕ ಮುರಳಿ ಕನ್ನನ್‌ ನೇತೃತ್ವದ 16ಕ್ಕೂ ಹೆಚ್ಚು ಅಧಿಕಾರಿ-ಸಿಬಂದಿ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಮುಂಜಾನೆ 7ರಿಂದ ಸಂಜೆ 6ರ ವರೆಗೂ ಶೋಧಿಸಿದ್ದಾರೆ. ಐವರು ಇ.ಡಿ. ಅಧಿಕಾರಿಗಳು ಮಲ್ಲೆಶ್ವರಂನ 10ನೇ ಕ್ರಾಸ್‌ನಲ್ಲಿರುವ ಮುಡಾದ ಮಾಜಿ ಆಯುಕ್ತ ನಟೇಶ್‌ ನಿವಾಸದ ಮೇಲೆ ದಾಳಿ ಮಾಡಿ¨ªಾರೆ. ಈ ವೇಳೆ ನಟೇಶ್‌ ಮುಡಾ ಆಯುಕ್ತರಾಗಿದ್ದಾಗ ನಿವೇಶನ ಹಂಚಿಕೆ ಮಾಡಿ ದ ಕೆಲವು ದಾಖಲೆಗಳು ಪತ್ತೆ ಯಾಗಿವೆ ಎನ್ನಲಾಗಿದೆ. ದಾಳಿ ವೇಳೆ ನಟೇಶ್‌ ಮನೆಯಲ್ಲೇ ಇದ್ದು, ಇ.ಡಿ. ಅಧಿಕಾರಿಗಳ ಶೋಧಕ್ಕೆ ಸಹಕಾರ ನೀಡಿದ್ದಾರೆ.

ಬಿಲ್ಡರ್‌ ಮಂಜುನಾಥ್‌ ಮನೆ ಮೇಲೆ ದಾಳಿ
ಜೆ.ಪಿ. ನಗರ ನಿವಾಸಿ ಹಾಗೂ ಎನ್‌. ಕಾರ್ತಿಕ್‌ ಡೆವಲಪರ್ಸ್‌ನ ಮಾಲಕ, ಬಿಲ್ಡರ್‌ ಎನ್‌. ಮಂಜುನಾಥ್‌ ಮನೆ ಮತ್ತು ಕಚೇರಿ ಮೇಲೆ 6 ಮಂದಿ ಇಡಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಈ ವೇಳೆ ಮುಡಾಗೆ ಸಂಬಂಧಿಸಿದ ಕೆಲವು ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಮಂಜುನಾಥ್‌ ಅವರು ಮೈಸೂರಿನಲ್ಲಿ ಕಾರ್ತಿಕ್‌ ಬಡಾವಣೆ ಹೆಸರಿನಲ್ಲಿ ಲೇಔಟ್‌ ನಿರ್ಮಾಣ ಮಾಡಿದ್ದು, 50:50 ಅನುಪಾತದಲ್ಲಿ ಸೈಟ್‌ ಹಂಚಿಕೆ ವೇಳೆ ಅಧಿಕಾರಿಗಳಿಗೆ ಲಂಚ ನೀಡಿದ್ದರು ಎಂಬ ಆರೋಪವಿದೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್‌ಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೂಡ ಇದೆ. ದಾಳಿ ವೇಳೆ ಮಂಜುನಾಥ್‌ ಮನೆಯಲ್ಲೇ ಇದ್ದರು. ಮಂಜುನಾಥ್‌ ಅವರ ಹಣಕಾಸಿನವ್ಯವಹಾರದ ಕುರಿತು ಮಾಹಿತಿ ಪಡೆಯಲು ಬ್ಯಾಂಕ್‌ನಲ್ಲೂ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಕೇಶ್‌ ಪಾಪಣ್ಣ ಮನೆ ಮೇಲೆ ದಾಳಿ
ಮೈಸೂರಿನ ಹೊರ ವಲಯದಲ್ಲಿರುವ ಹಿನಕಲ್‌ ನಿವಾಸಿ, ಜಿ.ಪಂ. ಮಾಜಿ ಸದಸ್ಯ ರಾಕೇಶ್‌ ಪಾಪಣ್ಣ ಅವರ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು, 2 ತಾಸಿೆಗೂ ಹೆಚ್ಚು ಕಾಲ ರಾಕೇಶ್‌ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next