Advertisement
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಡಾದಲ್ಲಿ ಸಿದ್ದರಾಮಯ್ಯರ ಪತ್ನಿಯ 14 ನಿವೇಶನಗಳ ಹಗರಣ ಮಾತ್ರವಲ್ಲ. ಸಾವಿರಾರು ಕೋಟಿ ರೂಪಾಯಿ ಹಗರಣಗಳು ನಡೆದಿದೆ ನೂರಾರು ನಿವೇಶನಗಳ ಅಕ್ರಮವಾಗಿದೆ. ಅರ್ಕಾವತಿಯಲ್ಲಿ 880 ಎಕರೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಮುಡಾಗಿಂತ ನೂರು ಪಟ್ಟು ದೊಡ್ಡ ಹಗರಣ ಅರ್ಕಾವತಿಯದ್ದು, ರೀಡೂ ಹೆಸರಿನಲ್ಲಿ ಮೋಸವಾಗಿ 880 ಎಕರೆ ಡಿನೋಟಿಫಿಕೇಶನ್ ಮಾಡಲಾಗಿದೆ. ಬಿಡಿಎ ಲೇಔಟ್ ರಚಿಸಿ ನಿವೇಶನದಾರರಿಗೆ ಹಂಚಿಕೆ ಮಾಡಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಹೇಳಿದರು.
ಹಗರಣ ನಡೆದಿರುವುದು ಸೂರ್ಯ- ಚಂದ್ರರಿರುವಷ್ಟೇ ಸತ್ಯ, ಹಗರಣ ಆಗಿಲ್ಲವೆಂದರೇ ಕೆಂಪಣ್ಣ ಆಯೋಗ ನೀಡಿದ ವರದಿ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ, ಯಾವ ಭಯ ಕಾಡುತ್ತಿದೆ. ಭ್ರಷ್ಟಾಚಾರ ಪೂರ ಮೈಮೇಲೆ ಮೆತ್ತಿಕೊಳ್ಳುತ್ತದೆ ಎಂಬ ಭಯವೇ?. ಸ್ನೇಹಮಯಿ ಕೃಷ್ಣ ದೂರುದಾರ, ಲೂಟಿಕೋರ ಅಲ್ಲ, ಲೂಟಿಕೋರರನ್ನು ಲೂಟಿಕೋರರು ಎಂದು ದೂರು ಕೊಡುವುದು ಅಪರಾಧವೇ? ಲೂಟಿ ಮಾಡಿದ್ದು ಯಾರು? ಅರ್ಕಾವತಿ ಲೂಟಿಯಲ್ಲಿ ಸ್ನೇಹಮಯಿ ಕೃಷ್ಣ ಅವರ ಪಾತ್ರವೇ? ಲೂಟಿಕೋರರ ಬಗ್ಗೆ ಮಾತನಾಡುವುದು ಬಿಟ್ಟು ದೂರುದಾರರ ಬಗ್ಗೆ ಏಕೆ ಮಾತನಾಡುತ್ತೀರಿ. ಮುಡಾ, ಅರ್ಕಾವತಿ, ಮಹರ್ಷಿ ವಾಲ್ಮೀಕಿ ಹಗರಣಗಳ ಬಗ್ಗೆ ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ ಎಂದು ಪ್ರಶ್ನಿಸಿದರು. ಈಗ ಕುಮಾರಸ್ವಾಮಿ ಸರಿ ಇಲ್ವಾ?
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರದ್ದು2007ರ ಪ್ರಕರಣ. 2018-19ರವರೆಗೂ ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಪಕ್ಷವೇ ಮುಖ್ಯಮಂತ್ರಿ ಮಾಡಿತ್ತು. ಈಗ ಕುಮಾರಸ್ವಾಮಿಯವರು ಕೆಟ್ಟವರಾಗಿಬಿಟ್ಟರೇ, 2017ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. 2018ರಲ್ಲಿ ಮುಖ್ಯಮಂತ್ರಿ ಮಾಡಿ ಈಗ ಕುಮಾರಸ್ವಾಮಿ ಸರಿ ಇಲ್ವಾ? ಮುಖ್ಯಮಂತ್ರಿಯವರ ಮೇಲೆ ಬಂದಿರುವ ಆರೋಪಕ್ಕೆ ಇನ್ನೊಬ್ಬರ ತೋರಿಸಿ ಉತ್ತರ ಹೇಳಲು ಆಗಲ್ಲ. ತನ್ನದು ಏನೆಂದು ಹೇಳಬೇಕು ಎಂದರು.
Related Articles
Advertisement