Advertisement

MUDA Case: ಲೋಕಾಯುಕ್ತದಿಂದ ಕೆಸರೆ ಗ್ರಾಮದ ವಿವಾದಿತ ಸ್ಥಳದಲ್ಲಿ ಮಹಜರು

12:19 AM Oct 02, 2024 | Team Udayavani |

ಮೈಸೂರು: ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮದ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಮೈಸೂರು ತಾಲೂಕಿನ ಕೆಸರೆ ಗ್ರಾಮದಲ್ಲಿರುವ ವಿವಾದಿತ ಜಾಗಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದರು.

Advertisement

6 ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಐವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದ ಮೈಸೂರು ಲೋಕಾಯುಕ್ತ ಪೊಲೀಸರು, ಸೋಮವಾರ ದೂರುದಾರ ಸ್ನೇಹ ಮಯಿ ಕೃಷ್ಣ ಅವರಿಗೆ ನೋಟಿಸ್‌ ನೀಡಿ ಮಂಗಳವಾರ ಬೆಳಗ್ಗೆ 7.30ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಕೆಸರೆಯ ಸರ್ವೇ ನಂ. 464 ಮಾತ್ರವಲ್ಲದೇ ಸಂಪೂರ್ಣ ಬೌಂಡರಿಯ ಸರ್ವೇ ಕಾರ್ಯ ನಡೆಯಿತು.

ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ವರ್ಗಾವಣೆಯಾದ ನಿವೇಶನ ವ್ಯವಹಾರದಲ್ಲಿ ಅಕ್ರಮವಾಗಿದೆಯೇ ಎಂಬ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಮುಂದಿನ ಹಂತದಲ್ಲಿ 14 ನಿವೇಶನಗಳಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಲಿದ್ದಾರೆ. ಬಳಿಕ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರಕ್ಕೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಸಾಧ್ಯತೆಗಳಿವೆ.

ಮಹಜರು ತೃಪ್ತಿ ನೀಡಿದೆ: ಸ್ನೇಹಮಯಿ ಕೃಷ್ಣ
ಸ್ಥಳ ಮಹ ಜರು ಬಳಿಕ ಸ್ನೇಹಮಯಿ ಕೃಷ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹು ಸ್ಪಷ್ಟವಾಗಿದೆ. ಮುಡಾ ಆಸ್ತಿಯನ್ನು ಕೃಷಿ ಭೂಮಿ ಮಾಡಿಕೊಂಡಿರುವುದು ನನ್ನ ಆರೋಪ. ಆ ಆರೋಪ ನಿಜ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪ್ರಕರಣದ ಹೇಳಿದರು. ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಸಿಎಂ ಪತ್ನಿಗೆ ಸೇರಿದೆ ಎನ್ನುತ್ತಿರುವ ಆಸ್ತಿ ಮುಡಾಕ್ಕೆ ಸೇರಿದ್ದು.

ಆ ಆಸ್ತಿಯನ್ನು ದೇವರಾಜು ಸುಳ್ಳು ದಾಖಲೆ ಸೃಷ್ಟಿಸಿ, ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದಾರೆ. ಅದನ್ನು ಸಿಎಂ ಪತ್ನಿಗೆ ಬರೆದಿರುವ ದಾಖಲಾತಿ ನನ್ನ ಬಳಿ ಇದೆ. 3 ಎಕರೆ 16 ಗುಂಟೆ ಜಾಗ ಮುಡಾಕ್ಕೆ ಸೇರಿಸಲಾಗಿದೆ. ಆದರೂ ಆ ಭೂಮಿ ಯನ್ನು ಮತ್ತೆ ಮುಡಾಕ್ಕೆ ಕೊಟ್ಟಿದ್ದೇವೆಂದು ಮುಡಾದಿಂದ ಬದಲಿ ನಿವೇಶನ ಪಡೆಯಲಾಗಿದೆ ಎಂದರು.

Advertisement

ನಾಳೆ ಮತ್ತೆ ಬರುವಂತೆ ನೋಟಿಸ್‌
ಅ. 3ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿ ರುವ ಜಾರಿ ನಿರ್ದೇಶನಾಲಯ ಕಚೇರಿಗೆ ಮತ್ತೆ ಬರುವಂತೆ ಸ್ನೇಹಮಯಿ ಅವರಿಗೆ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಮುಂದೇನು?
* ಮುಂದಿನ ಹಂತದಲ್ಲಿ 14 ನಿವೇಶನಗಳಿರುವ ಸ್ಥಳ ಪರಿಶೀಲನೆ ನಡೆಸಲಿರುವ ಲೋಕಾಯುಕ್ತ
* ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತೆರಳಿ ಅಗತ್ಯ ದಾಖಲೆಗಳ ಸಂಗ್ರಹ ಸಾಧ್ಯತೆ

ಚೆಕ್‌ಬೌನ್ಸ್‌: ಸ್ನೇಹಮಯಿ ಕೃಷ್ಣಗೆ ವಾರಂಟ್‌!
ಮೈಸೂರು: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಮುಡಾ ಪ್ರಕರಣದ ದೂರುದಾರ, ಸಾಮಾಜಿಕ ಕಾರ್ಯ ಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ. ಎನ್‌. ಕುಮಾರ್‌ ಎಂಬವರು 2015ರ ಜೂನ್‌ 30ರಂದು ಸ್ನೇಹಮಯಿ ಕೃಷ್ಣ ವಿರುದ್ಧ ಚೆಕ್‌ಬೌನ್ಸ್  ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next