Advertisement
ಸಿದ್ದರಾಮಯ್ಯ ಜನಪ್ರಿಯತೆಯನ್ನು ಸಹಿಸಲಾಗದೆ ಬಿಜೆಪಿಯವರು ಕುತಂತ್ರ ಮಾಡುತ್ತಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಅವರ ರಾಜೀನಾಮೆ ಪ್ರಶ್ನೆಯೇ ಬರುವುದಿಲ್ಲ. ತನಿಖೆಯಲ್ಲಿ ಸಾಬೀತಾದ ಮೇಲೆ ಆ ಚರ್ಚೆ ಹೊರತು, ಈಗ ಅದರ ಆವಶ್ಯಕತೆಯೇ ಇಲ್ಲ. ಸಿದ್ದರಾಮಯ್ಯ ಅವರನ್ನು 5 ವರ್ಷ ಅಲ್ಲಾಡಿಸಲಿಕ್ಕೂ ಆಗುವುದಿಲ್ಲ ಎಂದರು.
ಸಿದ್ದರಾಮಯ್ಯ ವಿಚಾರದಲ್ಲಿ ನೈತಿಕತೆ ಬಗ್ಗೆ ಮಾತನಾಡುವವರು ಮೊದಲು ತಮಗೆ ನೈತಿಕತೆ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ರಾಜಕೀಯ ಸಂಚು. ರಾಜಕೀಯವಾಗಿಯೇ ಎದುರಿಸುತ್ತೇವೆ. ಮುಖ್ಯಮಂತ್ರಿ ರಾಜೀನಾಮೆ ಕೇಳುವ ಮೊದಲು ಎಷ್ಟು ಜನರ ಮೇಲೆ ಎಫ್ಐಆರ್ ಇದೆ. ಎಷ್ಟು ಜನ ಜಾಮೀನಿನ ಮೇಲಿದ್ದಾರೆ ಲೆಕ್ಕ ಹಾಕಲಿ. ಅವರ ರಾಜೀನಾಮೆ ಪಡೆಯಲಿ ಎಂದು ತಿರುಗೇಟು ನೀಡಿದರು.