Advertisement

MUDA Case: ಸಚಿವ ಬೈರತಿ ಬುಡಕ್ಕೆ ಇ.ಡಿ.! ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್‌

01:59 AM Dec 03, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ದ ತನಿಖೆಯ ಬಿಸಿ ಈಗ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್‌ ಬುಡಕ್ಕೂ ತಟ್ಟಿದೆ. ಇ.ಡಿ. ತನಿಖೆ ಈಗ ರಾಜ್ಯಾ ಡಳಿತದ ಶಕ್ತಿ ಕೇಂದ್ರವಾದ ವಿಕಾಸ ಸೌಧದ ಮೆಟ್ಟಿ ಲೇರಿದ್ದು, ನಗರಾಭಿವೃದ್ಧಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

Advertisement

ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿಗೆ 14 ನಿವೇಶನ ಹಂಚಿಕೆಯಾಗಿದ್ದ ಪ್ರಕರಣ ವನ್ನು ಒಂದೆಡೆ ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದರೆ, ಇನ್ನೊಂದೆಡೆ ಇ.ಡಿ. ಕೂಡ ತನಿಖೆ ಯನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧ ಹಲವರನ್ನು ಈಗಾಗಲೇ ವಿಚಾರಣೆ ಗೊಳಪಡಿಸಿದೆ.

ಇತ್ತೀಚೆಗಷ್ಟೇ ಮೈಸೂರಿನ ಮುಡಾ ಕಚೇರಿಗೆ ಭೇಟಿ ನೀಡಿದ್ದ ಇ.ಡಿ. ಅಧಿಕಾರಿಗಳು ಕೆಲವು ದಾಖಲೆ ಹಾಗೂ ಮಾಹಿತಿ ಕಲೆ ಹಾಕಿದ್ದರು. ಈಗ ಸೋಮವಾರ ಸಂಜೆ ವಿಕಾಸಸೌಧಕ್ಕೆ ಭೇಟಿ ನೀಡಿದ ಇ.ಡಿ. ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌ ಅವರಿಗೆ ನೋಟಿಸ್‌ ನೀಡಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇ.ಡಿ. ನೋಟಿಸ್‌ ಏಕೆ?
ಪ್ರಾಧಿಕಾರ ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿದ್ದು, ನಿವೇಶನ ಹಂಚಿಕೆ, ಹಿಂದಿರುಗಿಸುವಿಕೆ ಮತ್ತಿತರ ಪ್ರಕ್ರಿಯೆ ಗಳು ಇಲಾಖೆಯ ಗಮನಕ್ಕೆ ಬಾರದೆಯೇ ನಡೆದಿದ್ದವೇ ಅಥವಾ ಗಮನಕ್ಕೆ ಬಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇ.ಡಿ. ನೋಟಿಸ್‌ ನೀಡಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇಲಾಖೆಯ ಸಚಿವ ಬೈರತಿ ಸುರೇಶ್‌ ವಿರುದ್ಧ ಈ ಪ್ರಕರಣದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಪ್ರಕರಣ ಬಯಲಾಗುತ್ತಿದ್ದಂತೆಯೇ ರಾತೋರಾತ್ರಿ ಮುಡಾ ಕಚೇರಿಗೆ ಭೇಟಿ ನೀಡಿ ಹೆಲಿಕಾಪ್ಟರ್‌ ಮೂಲಕ ಸಾವಿರಾರು ಕಡತಗಳನ್ನು ಹೊತ್ತೂಯ್ದಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ನಿಟ್ಟಿನಲ್ಲೂ ತನಿಖೆ ನಡೆಯಬಹುದು ಎನ್ನಲಾಗಿದ್ದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Advertisement

ಇ.ಡಿ. ನೋಟಿಸ್‌ ಏಕೆ?
-ನಗರಾಭಿವೃದ್ಧಿ ಇಲಾಖೆಯಡಿ ಮುಡಾ ಬರುವ ಹಿನ್ನೆಲೆಯಲ್ಲಿ ಇ.ಡಿ.ಯಿಂದ ನೋಟಿಸ್‌
-ನಿವೇಶನ ಹಂಚಿಕೆ, ಹಿಂದಿರುಗಿ ಸುವಿಕೆ ಮತ್ತಿತರ ಪ್ರಕ್ರಿಯೆ ಇಲಾಖೆಯ ಗಮನಕ್ಕೆ ಬಾರ ದೆಯೇ ನಡೆದಿತ್ತೇ ಎಂಬ ಪ್ರಶ್ನೆ
-ಇಲಾಖೆ ಗಮನಕ್ಕೂ ಬಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲವೇ ಎಂಬು ದಕ್ಕೆ ಉತ್ತರ ಕೇಳುವ ಸಾಧ್ಯತೆ
-ಇಲಾಖೆ ಸಚಿವ ಬೈರತಿ ಸುರೇಶ್‌ ವಿರುದ್ಧ ಈ ಪ್ರಕರಣದಲ್ಲಿ ಕೇಳಿಬಂದಿರುವ ಸಾಕಷ್ಟು ಆರೋಪಗಳು
-ಬೈರತಿ ಮೇಲೆರಾತೋರಾತ್ರಿ ಮುಡಾ ಕಚೇರಿಗೆ ಭೇಟಿ ನೀಡಿ ಸಾವಿರಾರು ಕಡತಗಳ ಹೊತ್ತೂಯ್ದಿದಿರುವ ಆರೋಪ
-ದಾಖಲೆಗಳ ಸಮೇತ ಮಂಗಳ ವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ನಲ್ಲಿ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next