Advertisement

ಕಟಪಾಡಿ: ಜೆ.ಎನ್‌. ನಗರದಲ್ಲಿ ಮಣ್ಣು ಮಿಶ್ರಿತ ನೀರು

03:18 PM Apr 15, 2020 | sudhir |

ಕಟಪಾಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಜೆ.ಎನ್‌.ನಗರ ಕಾಲೊನಿಗೆ ಮಣ್ಣು ಮಿಶ್ರಿತ ನೀರು ಸರಬ ರಾಜಾಗುತ್ತಿದ್ದು ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.

Advertisement

ಇಲ್ಲಿನ ಮಿನಿ ವಾಟರ್‌ ಸಪ್ಲೈ ಟಾಂಕಿಗೆ ಬಿಡುತ್ತಿರುವ ನೀರು ಯೋಗ್ಯವಾಗಿಲ್ಲ. ಹಾಳಾಗಿರುವ ಬೋರ್‌ವೆಲ್‌ ಸರಿಪಡಿಸಿದಲ್ಲಿ ನೀರು ಸರಬರಾಜು ಸಮರ್ಪಕ ವಾಗಬಹುದು. ಹೊಸ ಬೋರ್‌ವೆಲ್‌ ನಿಂದಲೂ ನೀರು ಪೂರೈಸಿದರೆ ಪ್ರಯೋಜನವಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಒ ಕೆ.ಎನ್‌. ಇನಾಯತ್‌ ಉಲ್ಲಾ ಬೇಗ್‌ ಅವರು, ತಾಂತ್ರಿಕ ತೊಂದರೆಯಿಂದ ಸಮಸ್ಯೆ ಉಂಟಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು ತಂತ್ರಜ್ಞರು ಆಗಮಿಸುವಲ್ಲಿ ವಿಳಂಬವಾಗಿದೆ. ಇದೀಗ ದುರಸ್ತಿ ಕಾರ್ಯ ನಡೆದಿದ್ದು, ಮೂರು ದಿನಗಳೊಳಗಾಗಿ ಶುದ್ಧ ನೀರು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next