Advertisement
ಆತಿಥ್ಯದ ಅವಕಾಶ ಪಣಂಬೂರು ಕಡಲ ಕಿನಾರೆಗೆ ಲಭಿಸಿದೆ.ಕರ್ನಾಟಕ ಮೊಯ್‌ಥಾಯ್ ಅಸೋಸಿಯೇಶನ್ ಹಾಗೂ ಮಂಕಿ ಮೆಮ್ ಫೈಟ್ ಕ್ಲಬ್ ಮತ್ತು ಫಿಟ್‌ನೆಸ್ ಸೆಂಟರ್ ಈ ಕ್ರೀಡಾಕೂಟ ಆಯೋಜಿಸಿದ್ದು, ನ.20 ರಿಂದ 24ರ ವರೆಗೆ ಐದು ದಿನ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ. ಸುಮಾರು 28 ರಾಜ್ಯಗಳ 400ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊ ಳ್ಳಲಿದ್ದಾರೆ. ಮೊದಲ ನಾಲ್ಕು ದಿನ ಸೀನಿಯರ್ ವಿಭಾಗದ ಸ್ಪರ್ಧೆ ನಡೆಯಲಿದ್ದು, ಕೊನೆಯ ದಿನ ಪ್ರೊ-ಇಂಡಿಯಾ ಸ್ಪರ್ಧೆ ಇರಲಿದೆ. ಸ್ಪರ್ಧೆಯ ರೂಪುರೇಷೆಗಳನ್ನು ಅಸೋಸಿ ಯೇಶನ್ ಸಿದ್ಧಪಡಿಸುತ್ತಿದೆ.
Related Articles
ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯದ ಸ್ಪರ್ಧಾಳುಗಳು ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. 2016ರಲ್ಲಿ ಮುಂಬಯಿಯಲ್ಲಿ ಕೂಟ ನಡೆದಾಗ ರನ್ನರ್ ಅಪ್, 2017ರಲ್ಲಿ ಜೈಪುರದಲ್ಲಿ ನಡೆದಾಗ ಸಮಗ್ರ ಪ್ರಶಸ್ತಿ, 2018ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಆಯೋಜನೆ ಗೊಂಡಿದ್ದಾಗ ರನ್ನರ್‌ಅಪ್ ಪ್ರಶಸ್ತಿ ರಾಜ್ಯಕ್ಕೆ ಲಭಿಸಿದೆ. ಈ ಹಿಂದೆ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಅನ್ವಿತಾ ಆಳ್ವ ತೃತೀಯ ಸ್ಥಾನ ಪಡೆದಿದ್ದಾರೆ.
Advertisement
ಏನಿದು ಮೊಯ್‌ಥಾಯ್?ಥಾç ಸಮರ ಕಲೆಗಳಲ್ಲಿ ಮೊಯ್‌ಥಾಯ್ ಒಂದು. ಕರಾಟೆ, ಕುಂಗ್ ಫು, ಕಿಕ್ ಬಾಕ್ಸಿಂಗ್‌ನಂಥದ್ದೇ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದನ್ನು ಆಡಲಾಗುತ್ತಿದೆ. ಮೈ ಕೈ ಗಟ್ಟಿಗೊಳಿಸುವುದಲ್ಲದೆ, ಸ್ವರಕ್ಷಣೆಗೂ ಸಹಕಾರಿ. ಏಷ್ಯನ್ ಗೇಮ್ಸ್‌ನಲ್ಲಿ ಡೆಮೋ ಇವೆಂಟ್ ಆಗಿ ಪರಿಚಯಿಸಲಾಗಿತ್ತು. ಸ್ಪರ್ಧೆಯಲ್ಲಿ ಕರಾವಳಿ ಸಂಸ್ಕೃತಿ
ಪಣಂಬೂರಿನಲ್ಲಿ ನಡೆಯುವ ಕೂಟದಲ್ಲಿ ಕರಾವಳಿ ಸಂಸ್ಕೃತಿಯ ಸೊಗಡನ್ನು ಬಿಂಬಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ಜತೆಗೆ ರಾಜ್ಯದ ಸಮಗ್ರ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರೀಯ ಮಟ್ಟದ ಮೊಯ್‌ಥಾಯ್ ಚಾಂಪಿಯನ್‌ಶಿಪ್ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಅದರಲ್ಲೂ ಬೀಚ್‌ನಲ್ಲಿ ಆಯೋಜನೆ ಇದೇ ಮೊದಲು. ಸುಮಾರು 28 ರಾಜ್ಯಗಳು ಭಾಗವಹಿಸಲಿದ್ದು, ಈಗಾಗಲೇ 25 ರಾಜ್ಯಗಳು ನೋಂದಣಿ ಮಾಡಿವೆ.
– ರಾಜ್‌ಗೋಪಾಲ್ ರೈ
ಮೊಯ್‌ಥಾಯ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ ನವೀನ್ ಭಟ್ ಇಳಂತಿಲ