ಬೆಂಗಳೂರು: ನಾನು ಹೊಸಕೋಟೆ ಕ್ಷೇತ್ರದವನು, ಉಸ್ತುವಾರಿ ಕೊಡಿ ಎಂದು ಬೇಡಿಕೆಯಿಟ್ಟಿಲ್ಲ. ಆದರೆ ನನಗೆ ಗ್ರಾಮಾಂತರ ಉಸ್ತುವರಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಕಚೇರಿ ಪೂಜೆಯ ಬಳಿಕ ಮಾತನಾಡಿದರು. ಈ ಖಾತೆ ಬೇಕು ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಲ್ಲ. ಆದರೆ ಮುಂದೆ ಈ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ ಎಂದ ಎಂಟಿಬಿ ನಾಗರಾಜ್ ಪರೋಕ್ಷವಾಗಿ ಬೆಂ. ಗ್ರಾಮಾಂತರ ಉಸ್ತುವಾರಿಯಾಗಲು ಇಂಗಿತ ವ್ಯಕ್ತಪಡಿಸಿದರು.
ವಿಶ್ವನಾಥ್ ಗೆ ಸ್ವಲ್ಪ ಬೇಸರವಿದೆ. ಇಂತಹ ಸಂದರ್ಭದಲ್ಲಿ ಬೇಸರ ಆಗುವುದು ಸಹಜ. ಆದರೆ ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಸಿಎಂ ಯಡಿಯೂರಪ್ಪ ಎಲ್ಲಾ ಸರಿಪಡಿಸುತ್ತಾರೆ ಎಂಬ ವಿಶ್ಚಾಸ ಇದೆ ಎಂದ ಅವರು, ಮಿತ್ರ ಮಂಡಳಿಯಲ್ಲಿ ಯಾವುದೇ ಬಿರುಕಿಲ್ಲ, ಯಾವುದೇ ಅಸಮಾಧಾನವಿಲ್ಲ, ನಾವೆಲ್ಲರೂ ಸಮಾಧಾನವಾಗಿಯೇ ಇದ್ದೇವೆ ಎಂದರು.
ಇದನ್ನೂ ಓದಿ:ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!
ಸಮಾಧಾನದಿಂದ ಪೂಜೆ ಮಾಡಿಯೇ ಕೆಲಸ ಪ್ರಾರಂಭ ಮಾಡಿದ್ದೇನೆ. ಈ ಹಿಂದೆ ವಸತಿ ಇಲಾಖೆ ಕೇಳಿದ್ದು ನಿಜ. ಆದರೆ ಕಾರಣಾಂತರಗಳಿಂದಗಳಿಂದ ಅದನ್ನು ಸಿಎಂ ನನಗೆ ಕೊಡಲಾಗಲಿಲ್ಲ. ಆದರೆ ಈಗ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಕೊಟ್ಟಿದ್ದಾರೆ. ಈ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆ ಹೆಸರು ತರುವ ರೀತಿ ಕೆಲಸ ಮಾಡುತ್ತೇನೆ. ಪಕ್ಷದ ಯಾವುದೇ ತೀರ್ಮಾನಕ್ಕೂ ನಾವೆಲ್ಲರೂ ಬದ್ದರಾಗಿರುತ್ತೇವೆ ಎಂದರು.
ಇದನ್ನೂ ಓದಿ: ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ
ಖಾತೆ ಬದಲಾವಣೆಯಾದ ಬಳಿಕ ಎಂಟಿಬಿ ನಾಗರಾಜ್ ಇಂದು ಕಚೇರಿ ಪೂಜೆ ನಡೆಸಿದರು. ಪೂಜೆಯಲ್ಲಿ ಎಂಟಿಬಿ ನಾಗರಾಜ್ ಕುಟುಂಬ ಭಾಗಿಯಾಗಿದ್ದರು.ಈ ಹಿಂದೆ ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದಅವರು, ಈಗ ಪೌರಾಡಳಿತ ಮತ್ತು ಸಕ್ಕರೆ ಖಾತೆ ನೀಡುತ್ತಿದ್ದಂತೆ ಕೊಠಡಿಯಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಖಾತೆ ಜವಬ್ದಾರಿ ವಹಿಸಿಕೊಂಡರು.