ಚಿಕ್ಕಬಳ್ಳಾಪುರ: ಅಂಬೇಡ್ಕರ್ ಆಶಯ ದಂತೆ ರಾಜಕಾರಣಿಗಳು ಕಾರ್ಯನಿರ್ವ ಹಿಸಿ ಮಾನವೀಯ ಮೌಲ್ಯ ಇಟ್ಟುಕೊಂ ಡು ಪ್ರಜಾಸೇವೆ ಮಾಡಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿ, ಸಿಎಂ, ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿ ಗಳ ಮುಂದೆ ತಮ್ಮದೇ ಶೈಲಿಯಲ್ಲಿ ಕೆಲ ಅಧಿಕಾರಿಗಳ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿ ತಾವು (ಹಿರಿಯ ಅಧಿಕಾರಿಗಳು ದಕ್ಷತೆಯಿಂದ) ಕಾರ್ಯನಿರ್ವಹಿಸು ತ್ತಿದ್ದೀರಿ. ಆದರೆ, ನಿಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೆಲ ಅಧಿಕಾರಿಗಳು ಕಳ್ಳರಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ನಿಗಾಯಿಡುವ ಕೆಲಸವನ್ನು ಮಾಡಬೇಕು ಎಂದರು.
ಸಚಿವರಿಗೆ ಟಾಂಗ್: ಜಾಣತನದ ರಾಜಕಾರಣಿ ಯಾರಾದರೂ ಇದ್ದರೆ ಅದು ಸಚಿವ ಡಾ.ಕೆ.ಸುಧಾಕರ್ ಮಾತ್ರವೆಂದರಲ್ಲದೆ, ನಿವೇಶನರಹಿತರಿಗೆ 500 ಎಕರೆ ಜಮೀನು ನೀಡಲು ಮೀಸಲಿಟ್ಟಿದ್ದಾರೆ. ಸುಧಾಕರ್ ಅವರಿಗೆ ಸಣ್ಣ ಪ್ರಶ್ನೆ ಏನಾದರೂ ಸ್ಮಶಾನಕ್ಕೆ, ಸಾರ್ವಜನಿಕರ ಉದ್ದೇಶಕ್ಕೆ ಜಮೀನು ಇಟ್ಟಿದ್ದೀಯ ಏನಪ್ಪ ಎಂದು ಕೇಳಿ ಪರೋಕ್ಷವಾಗಿ ಟಾಂಗ್ ನೀಡಿದರು.
ಜಿಲ್ಲೆಯಲ್ಲಿ ಫಾರಂ ನಂ.53 ಮತ್ತು 57ಗೆ ಎಷ್ಟು ಇಟ್ಟಿದ್ದೀರಾ ಜಿಲ್ಲೆಯಾದ್ಯಂತ ಸಾವಿರಾರು ಅರ್ಜಿಗಳು ಉಳಿಕೆಯಿದೆ. ಅದನ್ನು ಗಮನಹರಿಸ ಬೇಕು. ಸಚಿವ ಡಾ.ಕೆ.ಸುಧಾಕರ್ ಅವರು ಜನಪರ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಾರೆ ಎಂದರು.
ಸರ್ವೆ ಇಲಾಖೆಯಲ್ಲಿ ಗಮನಹರಿಸಿ: ಈ ಸರ್ಕಾರದ ಕೆಲ ಅಧಿಕಾರಿಗಳು ಕಳ್ಳರಿದ್ದಾರೆ. ನೀವು ಚಾಟಿ ಬೀಸಬೇಕು. ಕೈಮುಗಿದು ಕೇಳಿಕೊಳ್ಳುತ್ತೇನೆ. ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗ ಬೇಕೆಂದ ಜಿಲ್ಲಾ ಉಸ್ತುವಾರಿ ಸಚಿವರು ಸರ್ವೆ ಇಲಾಖೆಯಲ್ಲಿ ತಾವು ದಕ್ಷ ಅಧಿಕಾರಿ ಇದೀರಿ ಆದರೇ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ. ತಾವು ನಿಗಾಯಿಡ ಬೇಕು. ಮುನೀಶ್ ಮೌದ್ಗಿಲ್ ಅವರಿಗೆ ಕೈಮುಗಿದು ಮನವಿ ಮಾಡಿದರು.