Advertisement

MSRTC ನೌಕರರ ಮುಷ್ಕರ ಆರಂಭ: ಪ್ರಯಾಣಿಕರು ಸಂಕಷ್ಟದಲ್ಲಿ

11:35 AM Oct 17, 2017 | udayavani editorial |

ಮುಂಬಯಿ : ವೇತನ ಏರಿಕೆಯನ್ನು ಆಗ್ರಹಿಸಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಒಂದು ಲಕ್ಷಕ್ಕೂ ಅಧಿಕ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದು ದೀಪಾವಳಿ ಹಬ್ಬದ ಸಲುವಾಗಿ ದೂರದೂರುಗಳಿಗೆ ಪ್ರಯಾಣಿಸದವ ಸಹಸ್ರಾರು ಜನರಿಗೆ ಇದರಿಂದ ತೀವ್ರ ತೊಂದರೆ ಉಂಟಾಗಿದೆ.

Advertisement

ನಿನ್ನೆ ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದ್ದು  ನಿತ್ಯ ಓಡಾಟದ ಜನರ ಸಂಕಷ್ಟಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ಖಾಸಗಿ ವಾಹನಗಳಿಗೆ, ಶಾಲಾ ಬಸ್ಸುಗಳಿಗೆ ಪ್ರಯಾಣಿಕರ ಸಾಗಾಟಕ್ಕೆ ಅನುಮತಿ ನೀಡುವಂತೆ ಮಹಾರಾಷ್ಟ್ರ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ನೌಕರರ ಈ ಮುಷ್ಕರವನ್ನು ಕಾನೂನು ಬಾಹಿರವೆಂದು ಹೇಳಿದೆ. 

ರಾಜ್ಯ ಸಾರಿಗೆ ನಿಗಮದ ನೌಕರರು ತಮಗೂ ಏಳನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಅನುಷ್ಠಾನಿಸಬೇಕು ಮತ್ತು ಮಧ್ಯಾವಧಿಯಾಗಿ ಶೇ.25ರ ವೇತನ ಏರಿಕೆಯನ್ನು ಮಾಡಬೇಕು ಎಂದು ಒತ್ತಾಯಿಸಿ ಮುಷ್ಕರಕ್ಕೆ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next