Advertisement

9 ವರ್ಷಗಳಲ್ಲಿ ಎಂಎಸ್‌ಪಿ ಶೇ. 115 ಏರಿಕೆ

01:05 AM Feb 13, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿ ಯಲ್ಲಿ 9 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಶೇ. 115ರಷ್ಟು ಏರಿಕೆ ಯಾಗಿದೆ ಎಂದು ಸರಕಾರಿ ದಾಖಲೆಗಳಿಂದ ಮಾಹಿತಿ ಹೊರಬಿದ್ದಿದೆ. ಎಂಎಸ್‌ಪಿಗೆ ಸಂಬಂಧಿಸಿ ಕಾನೂನು ರೂಪಿಸುವಂತೆ ಆಗ್ರಹಿಸಿ ದಿಲ್ಲಿ ಚಲೋ ನಡೆಸಲು ರೈತರು ಮುಂದಾ ಗಿರುವಂತೆಯೇ ಈ ಮಾಹಿತಿ ಬಹಿರಂಗವಾಗಿದೆ.

Advertisement

2014-15ರ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಬೆಳೆಗಳನ್ನು ಖರೀದಿಸಲು ಕೇಂದ್ರ ಸರಕಾರ 1.06 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. 2022-23ರಲ್ಲಿ ಇದಕ್ಕಾಗಿ 2.28 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. 2014-15ಕ್ಕೆ ಹೋಲಿಸಿದರೆ 2022-23ರಲ್ಲಿ ಶೇ. 115ರಷ್ಟು ಏರಿಕೆ ಯಾಗಿದೆ. 2014-15ರಲ್ಲಿ 761.40 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಕೇಂದ್ರ ಸಂಗ್ರಹಿಸಿದ್ದು, ಇದು 2022-23ರಲ್ಲಿ 1062.69 ಲಕ್ಷ ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ.

ಪ್ರಸ್ತುತ ಮುಂದಿನ 5 ವರ್ಷಗಳ ವರೆಗೆ ದೀರ್ಘಾವಧಿಯ ಎಂಎಸ್‌ಪಿ ನೀತಿ ರೂಪಿಸುವ ಪ್ರಸ್ತಾವ ಕೇಂದ್ರ ಕೃಷಿ ಸಚಿವಾಲಯದ ಮುಂದೆ ಇಲ್ಲ ಎಂದು ಸಂಸತ್ತಿಗೆ ಫೆ. 6ರಂದು ನೀಡಿದ ಲಿಖೀತ ಉತ್ತರದಲ್ಲಿ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next