Advertisement

ಧೋನಿ ನಮ್ಮೆಲ್ಲರ ಪಾಲಿಗೆ ಹೀರೋ: ರಾಹುಲ್‌

07:58 PM Aug 25, 2020 | mahesh |

ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ಅವರ ವಿದಾಯವೆಂದರೆ ಇಡೀ ದೇಶಕ್ಕೆ, ವಿಶ್ವ ಕ್ರಿಕೆಟ್‌ ಪಾಲಿಗೆ ಅತ್ಯಂತ ನೋವಿನ ಹಾಗೂ ಭಾವುಕ ಕ್ಷಣ ಎಂಬುದಾಗಿ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

Advertisement

“ನಾವೆಲ್ಲರೂ ಧೋನಿ ಆಗಬೇಕೆಂಬ ಕನಸು ಕಾಣುತ್ತ ಬೆಳೆದವರು. ಅದರಲ್ಲೂ ಮುಖ್ಯವಾಗಿ ಸಣ್ಣ ಪಟ್ಟಣದಿಂದ ಬಂದ ನನ್ನಂಥವರ ಪಾಲಿಗೆ ಧೋನಿ ಓರ್ವ ಹೀರೋ ಆಗಿದ್ದರು. ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಮುಖ್ಯವಲ್ಲ, ನಿಮ್ಮ ಕನಸನ್ನು ಸಾಕಾರಗೊಳಿಸುವುದು ಮುಖ್ಯ…’ ಎಂದು ಐಪಿಎಲ್‌ ಬಿಡುಗಡೆ ಮಾಡಿದ ವೀಡಿಯೋ ಒಂದರಲ್ಲಿ ರಾಹುಲ್‌ ಹೇಳಿದ್ದಾರೆ.

“ಧೋನಿ ಕುರಿತು ಮಾತಾಡಲು ನನ್ನಲ್ಲಿ ಸಾಕಷ್ಟು ಶಬ್ದಗಳಿಲ್ಲ. ಅವರನ್ನೊಮ್ಮೆ ಗಟ್ಟಿಯಾಗಿ ಆಲಂಗಿಕೊಂಡು ಕೃತಜ್ಞತೆ ಅರ್ಪಿಸಬಲ್ಲೆ. ಹಾಗೆಯೇ ನಮ್ಮ ಪಂಜಾಬ್‌ ತಂಡದ ಮೇಲೆ ಸ್ವಲ್ಪ ಕನಿಕರ ಇರಲಿ ಎಂದೂ ಅವರಲ್ಲಿ ಕೇಳಿಕೊಳ್ಳಬೇಕಿದೆ’ ಎಂಬುದಾಗಿ ರಾಹುಲ್‌ ಹೇಳಿದರು.

ಕೆ.ಎಲ್‌. ರಾಹುಲ್‌ 2014ರ ಆಸ್ಟ್ರೇಲಿಯ ಪ್ರವಾಸದ ವೇಳೆ “ಬಾಕ್ಸಿಂಗ್‌ ಡೇ’ ಪಂದ್ಯದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದರು. ಕಾಕತಾಳೀಯವೆಂಬಂತೆ ಇದು ಧೋನಿ ಅವರ ಕೊನೆಯ ಟೆಸ್ಟ್‌ ಆಗಿತ್ತು! ಬಳಿಕ ಧೋನಿ ಸಾರಥ್ಯದಲ್ಲೇ ರಾಹುಲ್‌ ಏಕದಿನ ಹಾಗೂ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next