Advertisement

ಧೋನಿಗೆ ಬಿಸಿಸಿಐನ ಅಗ್ರ ಗುತ್ತಿಗೆ ಕಳಕೊಳ್ಳುವ ಆತಂಕ

08:34 AM Jan 05, 2018 | Team Udayavani |

ನವದೆಹಲಿ: ಒಂದು ಕಡೆ ವೇತನ ಹೆಚ್ಚಿಸಿ ಎಂದು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಗೆ ಭಾರತೀಯ ಕ್ರಿಕೆಟಿಗರು ಒತ್ತಾಯಿಸುತ್ತಿದ್ದರೆ ಇನ್ನೊಂದೆಡೆ ಇಡೀ ಗುತ್ತಿಗೆ ವ್ಯವಸ್ಥೆಯೇ ಬದಲಾಗುವ ಮುನ್ಸೂಚನೆಯೊಂದು ದೊರೆತಿದೆ.
ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಈಗ ಅಗ್ರ ಗುತ್ತಿಗೆಯಿಂದಲೇ ಹೊರಬೀಳುವ ಆತಂಕದಲ್ಲಿದ್ದಾರೆ.

Advertisement

ಇಲ್ಲಿಯವರೆಗೆ ಎ, ಬಿ ಹಾಗೂ ಸಿ ಶ್ರೇಣಿಗಳ ಗುತ್ತಿಗೆ ವ್ಯವಸ್ಥೆ ಜಾರಿಯಲ್ಲಿದೆ. ಹೊಸ ವ್ಯವಸ್ಥೆ ಜಾರಿಯಾದರೆ ಇದಕ್ಕೆ ಎ ಪ್ಲಸ್‌ ಶ್ರೇಣಿ ಸೇರ್ಪಡೆಯಾಗಿದೆ. ಇಲ್ಲಿ ಮೂರೂ ಮಾದರಿಯಲ್ಲಿ ಆಡುವ ಆಟಗಾರರಿಗೆ ಸ್ಥಾನ ನೀಡಲಾಗುತ್ತದೆ. ಆದರೆ ಟೆಸ್ಟ್‌ಗೆ ನಿವೃತ್ತಿ ಹೇಳಿರುವುದರಿಂದ ಈ ಶ್ರೇಣಿ ಸಿಗುವುದು ಸಾಧ್ಯವಿಲ್ಲ. ಸದ್ಯಕ್ಕೆ ಇದು ಪ್ರಸ್ತಾವದ ಹಂತದಲ್ಲಿರುವುದರಿಂದ ಈ ಬಗ್ಗೆ ಯಾವುದೇ ಖಾತ್ರಿ ಲಭಿಸಿಲ್ಲ.

ಸದ್ಯ ಆಟಗಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಎ,ಬಿ, ಸಿ ಶ್ರೇಣಿ ಜಾರಿಯಲ್ಲಿದೆ. “ಎ’ ವಿಭಾಗದಲ್ಲಿ 2 ಕೋಟಿ ರೂ., “ಬಿ’ ವಿಭಾಗದಲ್ಲಿ 1 ಕೋಟಿ ರೂ ಹಾಗೂ “ಸಿ’ ವಿಭಾಗದಲ್ಲಿ 50 ಲಕ್ಷ ರೂ. ಮೊತ್ತವನ್ನು ಆಟಗಾರರು ಕ್ರಮವಾಗಿ ಪಡೆಯುತ್ತಿದ್ದಾರೆ. ಇದೀಗ ಧೋನಿ “ಎ’ ವಿಭಾಗದಲ್ಲಿದ್ದು 2 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಬಿಸಿಸಿಐ ಮುಂದೆ ವೇತನ ಹೆಚ್ಚಳದ ಪ್ರಸ್ತಾಪವಿರುವುದರಿಂದ, ಈ ವ್ಯವಸ್ಥೆಯಲ್ಲಿ ಧೋನಿಯ ವೇತನವೆಷ್ಟೆನ್ನುವುದು ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next