Advertisement

ಎಂ ಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು: ಚೆನ್ನೈ ಕೋಚ್ ಮೈಕ್ ಹಸ್ಸಿ

02:49 PM Aug 15, 2020 | keerthan |

ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೈಕ್ ಹಸ್ಸಿ ಹೇಳಿದರು.

Advertisement

ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ಹಸ್ಸಿ, ಯುಎಇ ನಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಭಾಗವಹಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

ಕೋವಿಡ್ ಕಾರಣದಿಂದ ಕ್ರಿಕೆಟ್ ಗೆ ದೊಡ್ಡ ಬ್ರೇಕ್ ಸಿಕ್ಕಿರುವ ಕಾರಣ ಮತ್ತೆ ಐಪಿಎಲ್ ವೇಳೆಗೆ ತಂಡದ ಆಟಗಾರರು ಹೇಗೆ ಸಿದ್ದರಾಗುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆಟಗಾರರು ಮೈದಾನಕ್ಕಿಳಿದು ಕಠಿಣ ಪರಿಶ್ರಮ ಪಡಬೇಕಿದೆ. ನಮ್ಮಲ್ಲಿ ಅನುಭವಿ ಆಟಗಾರರೇ ಇರುವ ಕಾರಣ ಅವರು ತಮ್ಮ ಆಟದ ಬಗ್ಗೆ ಚೆನ್ನಾಗಿ ಅರಿತಿದ್ದಾರೆ ಎಂದು ಹಸ್ಸಿ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ದುಬೈ, ಶಾರ್ಜಾ ಮತ್ತು ಅಬುದಾಬಿಯಲ್ಲಿ ನಡೆಯಲಿದೆ. ಸಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಆಗಸ್ಟ್ 20ರ ನಂತರ ತಂಡಗಳು ದುಬೈಗೆ ಹಾರಲಿದೆ. ಅದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ಯಾಂಪ್ ನಡೆಸಲಿದ್ದು, ಬಹಳಷ್ಟು ಆಟಗಾರರು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next