Advertisement

ನಾನು ತಂಡದಿಂದ ಹೊರಬೀಳುವುದನ್ನು ತಪ್ಪಿಸಿದ್ದೇ ಧೋನಿ: ಕೊಹ್ಲಿ

03:45 AM Jan 08, 2017 | Team Udayavani |

ನವದೆಹಲಿ: ಮಹೇಂದ್ರ ಸಿಂಗ್‌ ಧೋನಿ ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕ ಅಷ್ಟೇ ಅಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದವರಾಗಿದ್ದಾರೆ. ಕೊಹ್ಲಿ, ಅಶ್ವಿ‌ನ್‌, ರವೀಂದ್ರ ಜಡೇಜಾ, ಆಜಿಂಕ್ಯ ರಹಾನೆ, ಸುರೇಶ್‌ ರೈನಾ…ಇಂತಹ ಪ್ರತಿಭೆಗಳು ಗುರುತಿಸಿಕೊಂಡಿದ್ದು ಧೋನಿ ನಾಯಕತ್ವದಲ್ಲಿ. ಇದನ್ನು ಭಾರತ ಕ್ರಿಕೆಟ್‌ನ ನೂತನ ನಾಯಕ ವಿರಾಟ್‌ ಕೊಹ್ಲಿ ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದಾರೆ. ತಾನು ತಂಡದಲ್ಲಿ ಸ್ಥಾನವುಳಿಸಿಕೊಂಡಿದ್ದೇ ಮಹೇಂದ್ರ ಸಿಂಗ್‌ ಧೋನಿಯಿಂದ ಎಂದು  ಹೇಳಿಕೊಂಡಿದ್ದಾರೆ.

Advertisement

ತಂಡದಲ್ಲಿ ಹಲವು ಬಾರಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕಾದ ಸಂದರ್ಭ ಬಂದಾಗ ನಾಯಕನಾಗಿ ಧೋನಿ ನನ್ನನ್ನು ರಕ್ಷಣೆ ಮಾಡಿದ್ದಾರೆ. ಹಲವು ಅವಕಾಶಗಳನ್ನು ನೀಡುವ ಜತೆಗೆ ಸಲಹೆಗಳನ್ನು ನೀಡಿದ್ದಾರೆ. ಧೋನಿ ಎಂಬ ಹೆಸರು ಕೇಳಿದೊಡನೆ ಮೊದಲು ನನ್ನ ತಲೆಗೆ ಬರುವುದೇ ನಾಯಕ ಎಂಬ ಪದ. ಅವರು ನಾಯಕನಾಗಿ ಹಲವು ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವರ ಸ್ಥಾನವನ್ನು ತುಂಬುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಗೆ ಧೋನಿ ನಾಯಕರಾಗಿದ್ದರು. ಇದೇ ಪಂದ್ಯದಲ್ಲಿ ಕೊಹ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ನಾಯಕರಾಗಿದ್ದಾರೆ. ಇತ್ತೀಚೆಗೆ ಸೀಮಿತ ಓವರ್‌ಗಳ ಪಂದ್ಯದ ನಾಯಕ ಸ್ಥಾನಕ್ಕೂ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಕೊಹ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next