Advertisement

ನಾಟಿ ವೈದ್ಯರ ಬಳಿ ಧೋನಿ ಚಿಕಿತ್ಸೆ: ಮರದ ಕೆಳಗೆ ಕುಳಿತ ಪಂಡಿತರಿಂದ ಔಷಧಿ

09:47 PM Jul 01, 2022 | Team Udayavani |

ರಾಂಚಿ: ಸಾಮಾನ್ಯವಾಗಿ ಕ್ರಿಕೆಟಿಗರು ತಮ್ಮ ಅನಾರೋಗ್ಯಗಳಿಗೆ ದುಬಾರಿ ಆಸ್ಪತ್ರೆಗಳ ಮೊರೆ ಹೋಗುವುದು ಸಾಮಾನ್ಯ. ಆದರೆ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ತಮ್ಮ ಮೊಣಕಾಲು ನೋವಿಗೆ ರಾಂಚಿಯಲ್ಲಿ ಮರವೊಂದರ ಅಡಿಯಲ್ಲಿ ನಾಟಿ ಔಷಧ ನೀಡುವ ನಾಟಿ ವೈದ್ಯರೊಬ್ಬರ ಮೊರೆ ಹೋಗಿದ್ದಾರೆ!

Advertisement

ಕಳೆದ ಕೆಲವು ದಿನಗಳಿಂದ ಅವರ ಬಳಿಯಲ್ಲೇ ತಮ್ಮ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ! ರಾಂಚಿ ಬಳಿಯಿರುವ ಕಟಿಂಗ್ಕೆಲಾ ಎಂಬ ಗ್ರಾಮದಲ್ಲಿ ಮರವೊಂದರ ಅಡಿಗೆ ಸಣ್ಣದೊಂದು ಗೂಡು ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ನಾಟಿ ವೈದ್ಯ ಬಂಧನ್‌ ಸಿಂಗ್‌ ಖಾರ್‌ವಾರ್‌ ಅವರೇ ಧೋನಿಯವರ ನಾಟಿ ವೈದ್ಯ.

ವಿಶೇಷವೆಂದರೆ, ಬಂಧನ್‌ ಸಿಂಗ್‌ ಅವರಿಗೆ ತೀರಾ ಇತ್ತೀಚಿನವರೆಗೂ ಧೋನಿ ಯಾರು ಎನ್ನುವುದೇ ಗೊತ್ತಿರಲಿಲ್ಲವಂತೆ!

“ಅತಿ ಸಾಮಾನ್ಯರಂತೆ ಬರುತ್ತಿದ್ದ ಅವರು ಚಿಕಿತ್ಸೆ ಪಡೆದು ಹೋಗುತ್ತಿದ್ದರು. ತಮ್ಮ ಪರಿಚಯವನ್ನೂ ಮಾಡಿಕೊಂಡಿರಲಿಲ್ಲ. ಇತ್ತೀಚೆಗೆ ಊರ ಮಕ್ಕಳೆಲ್ಲರೂ ಧೋನಿ ಅವರಿಗೆ ಮುತ್ತಿಗೆ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಆಗ ನನಗೆ ಧೋನಿ ಕ್ರಿಕೆಟ್‌ ಆಟಗಾರ ಎಂದು ತಿಳಿದುಬಂದಿತು. ಅವರ ತಂದೆ ತಾಯಿ ನನ್ನ ಬಳಿ ಚಿಕಿತ್ಸೆ ಪಡೆದರೂ ನನಗೆ ಅವರ ಹಿನ್ನೆಲೆ ಗೊತ್ತಿರಲಿಲ್ಲ’ ಎನ್ನುತ್ತಾರೆ ಬಂಧನ್‌ ಸಿಂಗ್‌.

ಯಾಕೆ ಧೋನಿ ಇಲ್ಲಿಗೆ ಹೋಗೋದು?
ಅವರು ತಯಾರಿಸುವ ಔಷಧಿಯನ್ನು ತಡ ಮಾಡದೇ ಅಲ್ಲೇ ಸೇವಿಸಬೇಕು. ಮನೆಗೆ ತೆಗೆದುಕೊಂಡು ಹೋಗಿ ಸೇವಿಸುವ ಹಾಗಿಲ್ಲ ಎಂಬ ನಿಯಮವನ್ನು ವೈದ್ಯರು ಧೋನಿಯವರಿಗೆ ಹೇಳಿರುವುದರಿಂದ ಪ್ರತಿ ನಾಲ್ಕು ದಿನಗಳಿಗೊಮ್ಮೆ ಧೋನಿಯವರೇ ಖುದ್ದು ವೈದ್ಯರ ಬಳಿ ತೆರಳಿ ಔಷಧಿ ಪಡೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ನಡೆಯುತ್ತಿದೆ. ಸುಮಾರು 30 ವರ್ಷಗಳಿಂದ ನಾಟಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಬಂಧನ್‌ ಸಿಂಗ್‌, ಧೋನಿ ಅವರ ತಂದೆ ತಾಯಿಗೂ ಚಿಕಿತ್ಸೆ ಕೊಟ್ಟಿದ್ದರಂತೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next