ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಧೋನಿ ಬಳಗ ಸೋಲನುಭವಿಸಿದೆ. ನಾಯಕನಾದ ಮೊದಲ ಪಂದ್ಯದಲ್ಲಿ ಡೆಲ್ಲಿ ನಾಯಕ ರಿಷಭ್ ಪಂತ್ ಗೆಲುವಿನ ನಗೆ ಬೀರಿದ್ದಾರೆ.
ಮೊದಲ ಪಂದ್ಯದಲ್ಲೇ ಸೋತ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ದಂಡ ಹಾಕಲಾಗಿದೆ. ನಿಧಾನಗತಿ ಓವರ್ ರೇಟ್ ಗಾಗಿ ಧೋನಿಗೆ 12 ಲಕ್ಷ ರೂ. ದಂಡ ವಿಧಿಸಿಲಾಗಿದೆ.
ಇದನ್ನೂ ಓದಿ:ಧವನ್ – ಪೃಥ್ವಿ ಶಾ ಪ್ರಚಂಡ ಬ್ಯಾಟಿಂಗ್ ಪರಾಕ್ರಮ ; ಡೆಲ್ಲಿ ಜಯಭೇರಿ
ಕಳೆದ ಸೀಸನ್ ನಲ್ಲಿ ಪಂದ್ಯಗಳು ತಡವಾಗಿ ಮುಗಿಯುತ್ತಿದ್ದರಿಂದ ಈ ಬಾರಿ ಬಿಸಿಸಿಐ ಕಠಿಣ ಕ್ರಮಗಳ ಮೊರೆ ಹೋಗಿದೆ. ಈ ಬಾರಿಯ ನಿಯಮದಂತೆ ಒಂದು ಗಂಟೆಗೆ 14.1 ಓವರ್ ಮುಗಿಯಬೇಕು. 90 ನಿಮಿಷದಲ್ಲಿ 20 ಓವರ್ ಮುಗಿದಿರಬೇಕು.
ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 188 ರನ್ ಗಳಿಸಿತ್ತು. ಆದರೆ ಇದನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 18.4 ಓವರ್ ನಲ್ಲಿ ಗುರಿ ತಲುಪಿತ್ತು. ಪೃಥ್ವಿ ಶಾ ಮತ್ತು ಶಿಖರ್ ಧವನ್ ಭರ್ಜರಿ ಅರ್ಧಶತಕ ಬಾರಿಸಿ ಸಿಎಸ್ ಕೆ ಬೌಲರ್ ಗಳನ್ನು ಕಾಡಿದ್ದರು.
ಇದನ್ನೂ ಓದಿ: ಕಲಬುರಗಿ: ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ‘ವಜಾ’ ಬೆದರಿಕೆ : 31 ನೌಕರರಿಗೆ ಗೇಟ್ ಪಾಸ್