ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಿದೆ. ಸೋಲಿನೊಂದಿಗೆ ಅಭಿಯಾನ ಆರಂಭಿಸಿದರೂ ನಾಯಕ ಧೋನಿ ಮಾತ್ರ ದಾಖಲೆಯೊಂದನ್ನು ಬರೆದಿದ್ದಾರೆ.
ಶುಕ್ರವಾರ ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಆಡಲು ಬಂದ ಧೋನಿ 7 ಎಸೆತಗಳಲ್ಲಿ ಅಜೇಯ 14 ರನ್ ಮಾಡಿದರು. ಅದರಲ್ಲಿ ಒಂದು ಸಿಕ್ಸರ್ ಒಂದು ಬೌಂಡರಿ ಹೊಡೆದರು. ಇದೇ ವೇಳೆ ಅವರು ಸಿಎಸ್ ಕೆ ಪರ 200 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು.
ಮಹೇಂದ್ರ ಸಿಂಗ್ ಧೋನಿ ಅವರು ಒಟ್ಟಾರೆಯಾಗಿ 230 ಸಿಕ್ಸರ್ ಬಾರಿಸಿದ್ದರು. ಎರಡು ವರ್ಷ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಆಡಿದ್ದರು. ಧೋನಿ 235 ಪಂದ್ಯದಲ್ಲಿ 230 ಸಿಕ್ಸರ್ ಬಾರಿಸಿದ್ದಾರೆ.
ಇದನ್ನೂ ಓದಿ:ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ: ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್ ಡಿಕೆ
ಅತೀ ಹೆಚ್ಚು ಸಿಕ್ಸರ್ ಬಾರಿಸಿದವ ಪಟ್ಟಿಯಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ‘ದಿ ಯೂನಿವರ್ಸ್ ಬಾಸ್’ 142 ಪಂದ್ಯಗಳಲ್ಲಿ 357 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.