ಎಸ್.ಧೋನಿ ತೆಗೆದುಕೊಂಡ ಘಟನೆ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ನಡೆದಿದೆ.
Advertisement
ಸದ್ಯ ಏಕದಿನ ನಾಯಕತ್ವದಲ್ಲಿ ಧೋನಿ ಇಲ್ಲ. ಕೊಹ್ಲಿ ಪೂರ್ಣಾವಧಿಯ ನಾಯಕನಾಗಿ ಜವಾಬ್ದಾರಿ ಪಡೆದಿದ್ದಾರೆ. ಹೀಗಾಗಿ ಡಿಆರ್‌ಎಸ್ (ತೀರ್ಪಿನ ವಿರುದ್ಧ ಮೇಲ್ಮನವಿ) ಸೇರಿದಂತೆ ತಂಡದೊಳಗಿನ ಪ್ರಮುಖ ನಿರ್ಧಾರವನ್ನು ಕ್ರೀಡಾಂಗಣದಲ್ಲಿ ಹಾಲಿ ನಾಯಕ ಕೊಹ್ಲಿಯೇ ತೆಗೆದು ಕೊಳ್ಳಬೇಕು. ಆದರೆ ಭಾನುವಾರ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅಭ್ಯಾಸಬಲದಿಂದ ಧೋನಿಯೇ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿಬಿಟ್ಟರು. ಆನಂತರ ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಖ್ಯೆಯಲ್ಲಿ ವೀಕ್ಷಣೆಗೆ ಕಾರಣವಾಗಿದೆ.
ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಎಸೆದ 27ನೇ ಓವರ್‌ನ ಕೊನೆ ಚೆಂಡು ಇಯಾನ್ ಮಾರ್ಗನ್ ಬ್ಯಾಟ್ಸ್ ಸವರಿ ವಿಕೆಟ್ ಕೀಪರ್ ಧೋನಿ ಕೈ ಸೇರಿತು. ಈ ವೇಳೆ ಔಟ್‌ಗಾಗಿ ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ತಿರಸ್ಕರಿಸಿದರು. ಈ ವೇಳೆ ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಬೇಕಿತ್ತು. ಆದರೆ ಮಾಜಿ ನಾಯಕ ಧೋನಿ ಕ್ಯಾಪ್ಟನ್ ಕೊಹ್ಲಿಗಿಂತ ಮೊದಲೇ ಡಿಆರ್‌ಎಸ್ ಸಿಗ್ನಲ್ ನೀಡಿದ್ದರು. ಧೋನಿ ಡಿಆರ್‌ಎಸ್ ಸಿಗ್ನಲ್ ಅನ್ನು ಅಂಪೈರ್ ಪುರಸ್ಕರಿಸಲಿಲ್ಲ. ಆನಂತರ ಕೊಹ್ಲಿ ಡಿಆರ್‌ಎಸ್‌ಗೆ ಸೂಚನೆ ನೀಡಿದ ಬಳಿಕ ಅಂಪೈರ್ ಅಧಿಕೃತವಾಗಿ ಪುರಸ್ಕರಿಸಿದರು. ಧೋನಿ ನಿರ್ಧಾರ ಸಮರ್ಥಿಸಿದ ಕೊಹ್ಲಿ
ಧೋನಿ ಸಲ್ಲಿಸಿದ ಮೇಲ್ಮವಿ ಶೇ.95ರಷ್ಟು ಸರಿ ಇದೆ ಎನ್ನುವುದು ಅಂಕಿ-ಅಂಶಗಳೇ ಹೇಳುತ್ತವೆ. ಈ ಬಗ್ಗೆ ಯಾವುದೇ ಚರ್ಚೆ ಬೇಡ. ಧೋನಿ ನಿರ್ಧಾರವನ್ನು ನಾನು ಯಾವಾಗಲೂ ಹೆಚ್ಚು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.