ಮಂಗಳೂರು: ವಿಯೆಟ್ನಾಂನಲ್ಲಿ ಜು. 27ರಿಂದ ಆ. 4ರ ವರೆಗೆ ನಡೆದ ಮಿಸಸ್ ಇಂಡಿಯಾ ವರ್ಲ್ಡ್ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ “ಮಿಸಸ್ ಪಾಪ್ಯುಲರ್ 2017′ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಸೌಜನ್ಯಾ, ಹಾಟ್ ಮೊಂಡೆ ಸಂಸ್ಥೆಯು ಈ ಸ್ಪರ್ಧೆಯನ್ನು ನಡೆಸಿತ್ತು ಎಂದರು.
ವಿವಿಧ ದೇಶಗಳ 8,000 ಸ್ಪ ರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ “ಬ್ಯೂಟಿ ವಿತ್ ಹಾರ್ಟ್’ ಸೇರಿದಂತೆ 15 ವಿವಿಧ ಟೈಟಲ್‌ಗಳಿಗಾಗಿ 60 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರರಲ್ಲೂ ಶಾರ್ಟ್‌ಲಿಸ್ಟ್ ಮಾಡಿ 50ಕ್ಕೆ ಇಳಿಸಲಾಗಿತ್ತು. ಬಳಿಕ ಟಾಪ್ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಬಳಿಕ ಟಾಪ್ 14ರ ಆಯ್ಕೆ ನಡೆದಿದ್ದು, ಇದರಲ್ಲೂ ನಾನು ಆಯ್ಕೆಯಾಗಿದ್ದೆ. ಅಂತಿಮವಾಗಿ 7ನೇ ಸ್ಥಾನ ಪಡೆಯುವುದರೊಂದಿಗೆ ಮಿಸಸ್ ಪಾಪ್ಯುಲರ್ 2017 ಕಿರೀಟ ಪಡೆದುಕೊಂಡೆ ಎಂದರು.
ಮಿಸೆಸ್ ಟ್ಯಾಲೆಂಟ್ ಟೈಟಲ್‌ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ನಾನು ದೇವಿಯ ಅವತಾರವನ್ನು “ಶಕ್ತಿ’ ಹೆಸರಿನಲ್ಲಿ ಪ್ರದರ್ಶಿಸಿದ್ದೆ. ಹೊಸದಿಲ್ಲಿಯ ರಾಷ್ಟ್ರೀಯ ಅಂಧ ಮಕ್ಕಳ ಶಾಲೆಯ ನೆರವಿಗೆ ಪೂರಕವಾಗಿ ನಡೆದ ಬ್ಯೂಟಿ ವಿತ್ ಹಾರ್ಟ್ ಟಾಸ್ಕ್ನಲ್ಲಿ 2ನೇ ಸ್ಥಾನ ಲಭಿಸಿದೆ. ಈ ಸ್ಪರ್ಧೆಯ ಮೂಲಕ ಅಂಧ ಮಕ್ಕಳ ಶಾಲೆಗೆ 1,05,774 ರೂ. ಸಂದಂತಾಗಿದೆ ಎಂದವರು ವಿವರಿಸಿದರು.
ಸೌಜನ್ಯಾ ಹೆತ್ತವರಾದ ಎಂ. ಸದಾಶಿವ ಹೆಗ್ಡೆ ಹಾಗೂ ನಿಟ್ಟಡೆಗುತ್ತು ಸುಮತಿ ಹೆಗ್ಡೆ ಉಪಸ್ಥಿತರಿದ್ದರು.