ಶಹಾಪುರ: ಪ್ರತಿಷ್ಠಿತ ವಿಪಿಆರ್ ಎಂಟರ್‌ಟೈನ್ ಮೆಂಟ್ ಪ್ರೈವೆಟ್ ಲಿಮಿಟೆಡ್ ಗುಜರಾತಿನ ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಮಿಸೆಸ್ ಇಂಡಿಯಾ-2022 ಸೌಂದರ್ಯ ಸ್ಪರ್ಧೆಯಲ್ಲಿ ತಾಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಅನುಪಮಾ ಆರ್. ಶಿವಕುಮಾರ ಮಿಸೆಸ್ ಡಿಲಿಜೆಂಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನ ಹೋಟೆಲ್ ಪ್ರçಡ್ ಪ್ಲಾಜಾದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸುಮಾರು 800ಕ್ಕೂ ಅಧಿಕ ಸ್ಪರ್ಧಿಗಳು ದೇಶದ ವಿವಿಧೆಡೆಯಿಂದ ಆಗಮಿಸಿದ್ದರು.
ಅಂತಿಮ ಸುತ್ತಿನಲ್ಲಿ ಕೇವಲ 39 ಸ್ವರ್ಧಿಗಳು ಆಯ್ಕೆಯಾಗಿದ್ದು, ತಾಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಪ್ರಥಮವಾಗಿ ಆಯ್ಕೆಯಾಗುವ ಮೂಲಕ ಮಿಸೆಸ್ ಡಿಲಿಜೆಂಟ್ ಇಂಡಿಯಾ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ವಿಟಿಆರ್ ಎಂಟರ್‌ಟೈನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪನಿಯು 3 ತಿಂಗಳ ಹಿಂದೆಯೇ ಈ ಎಲ್ಲ ಸ್ಪರ್ಧಿಗಳಿಗೆ ಯೋಗ, ಆಹಾರ ಪದ್ಧತಿ, ವ್ಯಾಯಾಮ, ಧ್ಯಾನ, ತತ್ವಶಾಸ್ತ್ರ ಇತ್ಯಾದಿ ತರಬೇತಿ ನೀಡಿದ್ದರು.
ಇಂತಹ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸ ಬೇಕೆಂಬುದು ನನ್ನ ಕನಸಾಗಿತ್ತು. ಅದು ನನಸಾಗಿದೆ. ಸ್ಪರ್ಧಾ ವಿಜೇತರಿಗೆ ಕಂಪನಿಯು “ಮಿಸಸ್ ಡಿಲಿಜೆಂಟ್’ ಎಂಬ ಬಿರುದು ನೀಡಿ ಗೌರವಿಸಿದೆ. ಸಂದರ್ಶನ, ರ್‍ಯಾಂಪ್ ನಡಿಗೆ, ಮೇಕಪ್, ವಾಕ್ ಚಾತುರ್ಯ ಇತ್ಯಾದಿ ಪ್ರತಿಭೆಗಳನ್ನು ಸಹ ಸ ರ್ಧೆಯಲ್ಲಿ ಪರೀಕ್ಷಿಸಲಾಯಿತು. ವಿದ್ಯಾ ಕಬ್ರಾ, ವಿಜಯಾ ಕಬ್ರಾ ಅವರು ಈ ಕಂಪನಿಯ ರಾಯಭಾರಿಗಳಾಗಿದ್ದರು. ಸ್ಪರ್ಧೆಯಲ್ಲಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.
-ಅನುಪಮಾ ಶಿವಕುಮಾರ, ಮಿಸಸ್ ಡಿಲಿಜೆಂಟ್ ಪ್ರಶಸ್ತಿ ಪುರಸ್ಕೃತೆ