Advertisement

ಎಂಆರ್‌ಪಿಎಲ್‌ಗೆ ಸದ್ಯ ಬಾಧಕವಿಲ್ಲ

12:20 AM Jan 06, 2020 | Team Udayavani |

ಮಂಗಳೂರು: ಅಮೆರಿಕ- ಇರಾನ್‌ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದರೂ ಸದ್ಯ ಕೊಲ್ಲಿ ರಾಷ್ಟ್ರಗಳಿಂದ ಎಂಆರ್‌ಪಿಎಲ್‌ಗೆ ಕಚ್ಚಾ ತೈಲ ಆಮದಿನ ಮೇಲೆ ಯಾವುದೇ ಪರಿಣಾಮ ಆಗುವ ಸಾಧ್ಯತೆಯಿಲ್ಲ. ಹಲವು ತಿಂಗಳುಗಳಿಂದ ಎಂಆರ್‌ಪಿಎಲ್‌ ಇರಾನಿ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿಲ್ಲ; ಇತರ 30 ದೇಶ ಗಳಿಂದ ಪೂರೈಕೆಯಾಗುತ್ತಿದೆ.

Advertisement

ಈ ಹಿಂದೆ ಇರಾನ್‌ನಿಂದಲೇ ಆಮದಾಗುತ್ತಿತ್ತು. ಆದರೆ ಅಮೆರಿಕವು ಭಾರತ ಸಹಿತ 8 ರಾಷ್ಟ್ರಗಳಿಗೆ ಇರಾನಿ ತೈಲ ಆಮದಿಗೆ ನಿರ್ಬಂಧ ವಿಧಿಸಿರುವುದರಿಂದ ಸುಮಾರು 6 ತಿಂಗಳಿನಿಂದ ಅಲ್ಲಿಂದ ಬರುವ ಕಚ್ಚಾ ತೈಲ ನಿಂತಿದೆ.

ಭೀತಿ ತಪ್ಪಿದ್ದಲ್ಲ
ಉಭಯ ದೇಶಗಳ ಸಂಘರ್ಷ ತೀವ್ರ ಸ್ವರೂಪ ತಾಳಿದರೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಅಥವಾ ಕೊರತೆ ಖಚಿತ. ಯಾಕೆಂದರೆ ಅಂತಹ ಸಂದರ್ಭದಲ್ಲಿ ಇತರ ದೇಶಗಳ ತೈಲ ಹೇರಿದ ಹಡಗುಗಳು ಇತ್ತ ಬರಲು ಹಿಂಜರಿಯುವುದರಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಸಂಸ್ಕರಣ ಘಟಕಗಳ ಮೇಲೆ, ಗ್ರಾಹಕರ ಮೇಲೆ ದುಷ್ಪರಿಣಾಮ ಬೀರಬಹುದು.

ದಿನೇದಿನೇ ಏರಿಕೆ
ಅಮೆರಿಕ – ಇರಾನ್‌ ಯುದ್ಧ ಕಾರ್ಮೋಡದ ಪರಿಣಾಮ ಪೆಟ್ರೋಲ್‌, ಡೀಸೆಲ್‌ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜ. 1ರಂದು ಪೆಟ್ರೋಲ್‌ ಲೀ.ಗೆ. 77.02 ರೂ., ಡೀಸೆಲ್‌ ಲೀ.ಗೆ. 69.61 ರೂ. ಇತ್ತು. ಜ. 4ರಂದು ಪೆಟ್ರೋಲ್‌ ದರ 77.28 ರೂ.ಗೆ, ಡೀಸೆಲ್‌ 70.01 ರೂ.ಗೆ ಏರಿಕೆಯಾಗಿದೆ.

ಪರೋಕ್ಷ ಭೀತಿ
ಎಂಆರ್‌ಪಿಎಲ್‌ಗೆ ಇರಾನ್‌ನಿಂದ ಕಚ್ಚಾತೈಲ ಪೂರೈಕೆಯಾಗದಿದ್ದರೂ ಇರಾಕ್‌ನಿಂದ ಮಾಸಿಕ ಸರಾಸರಿ ಎರಡು ಹಡಗುಗಳಲ್ಲಿ ಪೂರೈಕೆಯಾಗುತ್ತಿದೆ. ಯುದ್ಧ ನಡೆದ ಪಕ್ಷದಲ್ಲಿ ಅದರ ಪರಿಣಾಮ ನೆರೆಯ ಇರಾಕ್‌ಗೆ ತಟ್ಟುವ ಸಾಧ್ಯತೆ ಇರುವುದರಿಂದ ನಮ್ಮಲ್ಲೂ ಪರೋಕ್ಷ ಭೀತಿ ಇದ್ದೇ ಇದೆ ಎನ್ನುತ್ತಾರೆ ಎಂಆರ್‌ಪಿಎಲ್‌ ಅಧಿಕಾರಿಗಳು.

Advertisement

ಅಮೆರಿಕ-ಇರಾನ್‌ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸತೀಶ್‌ ಎನ್‌. ಕಾಮತ್‌,
ದ.ಕ., ಉಡುಪಿ ಪೆಟ್ರೋಲ್‌-ಡೀಸೆಲ್‌ ಅಸೋಸಿಯೇಶನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next