Advertisement
ಮಂಗಳೂರು ಹಾಗೂ ಬಂಟ್ವಾಳದ ನೀರಿನ ಅಭಾವ ತಪ್ಪಿಸುವ ದೃಷ್ಟಿಯಿಂದ ನೀರು ಹರಿಸುವ ಕುರಿತು ಕೈಗೊಂ ಡಿರುವ ಕ್ರಮಗಳನ್ನು ಮಂಗಳೂರು ಸ. ಕಮಿಷನರ್ ರವಿಚಂದ್ರ ನಾಯ್ಕ ಅವರಿಗೆ ವಿವರಿಸಲಾಯಿತು. ಅಣೆಕಟ್ಟು ಪ್ರದೇಶ ಹಾಗೂ ಅಲ್ಲಲ್ಲಿ ಹೊಂಡಗಳಲ್ಲಿ ತುಂಬಿರುವ ಮರಳಿನ ಹೂಳು ತೆರವುಗೊಳಿಸಲು ಕ್ರಮ ಕೈಗೊಳ್ಳಲು ಎಸಿಗೆ ತಿಳಿಸಲಾಯಿತು.
ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾದ ಪರಿಣಾಮ ಕುಮಾರಧಾರಾ ನದಿಯ ಮೂಲಕ ನೀರಿನ ಹರಿವು ಕೊಂಚ ಆರಂಭಗೊಂಡಿದ್ದು, ಆದರೆ ಅದು ಎಂಆರ್‌ಪಿಎಲ್ ಡ್ಯಾಂನಲ್ಲಿ ಶೇಖರಣೆಯಾಗಿದೆ. ಹೀಗಾಗಿ ಅಲ್ಲಿನ ಮರಳನ್ನು ಡ್ರೆಜ್ಜಿಂಗ್ ಯಂತ್ರದ ಮೂಲಕ ತೆರವುಗೊಳಿಸುವ ಕಾರ್ಯವನ್ನು ಶಾಸಕರು ಹಾಗೂ ಅಧಿಕಾರಿಗಳ ತಂಡ ವೀಕ್ಷಣೆ ನಡೆಸಿತು. ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ, ಎಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ, ಪವನ್ ಕುಮಾರ್ ಶೆಟ್ಟಿ, ಮಂಜು ಮತ್ತಿತರರು ಉಪಸ್ಥಿತರಿದ್ದರು.
Related Articles
ಬಂಟ್ವಾಳದ ಜನತೆಯ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಪ್ರಸ್ತುತ ಒಂದಷ್ಟು ದಿನಗಳ ಕಾಲ ಮಳೆ ಬರದಿದ್ದರೂ, ನದಿಯಲ್ಲಿ ಲಭ್ಯವಿರುವ ನೀರನ್ನೇ ಉಪಯೋಗಿಸಿಕೊಂಡು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
Advertisement
ಶಾಸಕರು ಹಾಗೂ ಅಧಿಕಾರಿಗಳ ತಂಡ ಎಂಆರ್‌ಪಿಎಲ್ ಸರಪಾಡಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.