Advertisement

Politics: ಯತೀಂದ್ರ-ಹರಿಪ್ರಸಾದ್‌ ಹೇಳಿಕೆಗೆ ಪೇಜಾವರ ಶ್ರೀ ಆಕ್ಷೇಪ

10:27 PM Jan 04, 2024 | Team Udayavani |

ವಿಜಯಪುರ: ಆರೆಸ್ಸೆಸ್‌ ಹಾಗೂ ಬಿಜೆಪಿ ಹಿಂದೂರಾಷ್ಟ್ರದ ಮೂಲಕ ಮತ್ತೂಂದು ಪಾಕಿಸ್ಥಾನ-ಆಫ್ಘಾನಿಸ್ಥಾನ ಮಾಡ ಹೊರಟಿವೆ ಎಂಬ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ಮತ್ತೂಂದು ಗೋಧ್ರಾ ಘಟನೆ ನಡೆಯಲಿದೆ ಎಂದಿರುವ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿಕೆಗೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಆಕ್ಷೇಪ ವ್ಯಕಪಡಿಸಿದ್ದಾರೆ.

Advertisement

ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು, ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲ ಜಾತಿ, ಧರ್ಮ, ಪಂಥ, ಪಂಗಡಗಳ ಜನರನ್ನು ಒಳಗೊಂಡಿದೆ. ಹೀಗಿದ್ದರೂ ಪಾಕಿಸ್ಥಾನ, ಅಫ್ಘಾನಿಸ್ಥಾನ ಮಾಡ ಹೊರಟಿದ್ದಾರೆ ಎಂಬುದು ಈ ಕುರಿತು ಅವರು ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದರು.

ಮತ್ತೂಂದು ಗೋಧ್ರಾ ಘಟನೆ ನಡೆಯಲಿದೆ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕ ಹರಿಪ್ರಸಾದ್‌ ದೇಶದಲ್ಲಿ ಭಯ ಸೃಷ್ಟಿಸಲು ಮುಂದಾಗಿದ್ದಾರೆ. ಅವರಿಗೆ ವಿಧ್ವಂಸಕ ಕೃತ್ಯ ನಡೆಯುವ ಮಾಹಿತಿ ಇದ್ದರೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ಕೇಳಿದರೆ ಹೇಳುತ್ತೇನೆ ಎನ್ನುವುದು ವಿಧ್ವಂಸಕ ಕೃತ್ಯ ನಡೆಯಲಿ ಎಂಬ ಮನೋಭಾವವಾಗಲಿದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಪ್ರಜೆಗಳ ರಕ್ಷಿಸುವರೋ, ವಿಧ್ವಂಸಕ ಕೃತ್ಯ ನಡೆಸುವವರನ್ನು ರಕ್ಷಿಸಲು ಮುಂದಾಗಿದ್ದಾರೋ. ಇಂಥ ಹೇಳಿಕೆಗಳ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕೃತ್ಯ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ ವಿರುದ್ಧ ಹರಿಹಾಯ್ದರು.

ತಪ್ಪಿಸ್ಥರನ್ನು ಶಿಕ್ಷಿಸಲು ನಮ್ಮ ವಿರೋಧವಿಲ್ಲ. ಆದರೆ ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಕರಸೇವಕರ ಬಂಧನ ಮೂಲಕ ಸರಕಾರ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡುತ್ತಿದೆ. ಬಂಧನಕ್ಕೆ ಇದು ಸರಿಯಾದ ಸಮಯವಲ್ಲ ಎಂದರು.

Advertisement

ಹಿಂದೂ ರಾಷ್ಟ್ರವಾಗಲು ಬಾಕಿ ಏನಿದೆ? ಹಿಂದೂಸ್ಥಾನದಲ್ಲಿರುವ ನಾವು ಹಿಂದೂಸ್ಥಾನಿ ಎಂದು ಹೆಮ್ಮೆಯಿಂದ ಹೇಳಬೇಕು. ನಮ್ಮನ್ನು ನಾವು ಹಿಂದೂಗಳೆಂದು ಹೇಳಿಕೊಳ್ಳುವುದಕ್ಕೆ ಯಾವ ಸಂವಿಧಾನ ವಿರೋಧಿಸುತ್ತದೆ .
– ವಿಶ್ವಪ್ರಸನ್ನ ತೀರ್ಥರು, ಉಡುಪಿ ಪೇಜಾವರ ಮಠಾಧೀಶ

ಯತೀಂದ್ರ ಸಿಎಂ ಸಿದ್ದರಾಮಯ್ಯನವರ ಪುತ್ರ ಅಷ್ಟೇ. ಮುಸಲ್ಮಾನರ ಓಲೈಕೆಗಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ. ಯತೀಂದ್ರ ತಮ್ಮ ತಂದೆಯಿಂದ ಪ್ರಚಾರಕ್ಕೊಳಗಾಗಿದ್ದಾರೆ. ತಂದೆ-ಮಗ ತತ್‌ಕ್ಷಣ ಮತಾಂತರಗೊಂಡು ಮುಸಲ್ಮಾನರಾಗುವುದು ಒಳ್ಳೆಯದು. ಇಬ್ಬರಿಗೂ ಈ ದೇಶದಲ್ಲಿರಲು ಯೋಗ್ಯತೆ ಇಲ್ಲ. ಅವರಿಬ್ಬರು ಪಾಕಿಸ್ಥಾನಕ್ಕೆ ಹೋಗಿ ಬಿಡಲಿ. ಇವರಿಗೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇಲ್ಲ, ದೇಶಭಕ್ತಿ ಬಗ್ಗೆ ಗೌರವವೂ ಇಲ್ಲ.
-ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next