Advertisement

“ಆಟಿಡೊಂಜಿ ದಿನ’ದ ಹಾಡು ಕೊಂಡಾಡಿದ ಒಡಿಯೂರು ಶ್ರೀ

10:51 PM Oct 23, 2019 | mahesh |

ಭವಿಷ್‌ ಆರ್‌.ಕೆ. ಕ್ರಿಯೇಷನ್ಸ್‌ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ತುಳು ಸಿನೆಮಾದ ಹಾಡನ್ನು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆ ಮಾಡಿ, ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಹಾಡಿದ್ದಾರೆ.

Advertisement

ರಾಧಾಕೃಷ್ಣ ನಾಗರಾಜು ಅವರ ನಿರ್ಮಾಣದ “ಆಟಿಡೊಂಜಿ ದಿನ’ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್‌ ಕೊಣಾಜೆಕಲ್ಲು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಪ್ರಸ್ತುತ ಎ.ಎಸ್‌. ವೈಭವ್‌ ಪ್ರಶಾಂತ್‌ ಅವರು ನಿರ್ದೇಶನ ಜವಾಬ್ದಾರಿ ವಹಿಸಿ ಸಿನೆಮಾ ಪೂರ್ಣಗೊಳಿಸಿದ್ದಾರೆ.

ಆಟಿಯಲ್ಲಿ ಒಂದು ದಿನ ನಡೆಯುವ ಕಥೆಯನ್ನು ಆಧರಿಸಿ ಈ ಸಿನೆಮಾ ತಯಾರಿಸಲಾಗಿದೆ. ಪೃಥ್ವೀ ಅಂಬರ್‌ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ವಾಸು ಮಲ್ಪೆ, ಶ್ರದ್ಧಾ ಸಾಲ್ಯಾನ್‌, ದೀಪಕ್‌ ರೈ ಪಾಣಾಜೆ, ಅನಿಲ್‌ ರಾಜ್‌, ವಿಶ್ವನಾಥ್‌ ಮೂಡು ಬಿದಿರೆ, ಸೂರಜ್‌ ಸಾಲ್ಯಾನ್‌, ಸುರೇಂದ್ರ ಕುಮಾರ್‌ಹೆಗ್ಡೆ, ಶೈಲಾ ಶ್ರೀ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಛಾಯಾಚಿತ್ರಗ್ರಹಣ: ನರೇಂದ್ರ ಗೌಡ, ಕಥೆ-ಚಿತ್ರಕಥೆ : ಹ್ಯಾರಿಸ್‌ ಕೊಣಾಜೆಕಲ್‌, ಆಕಾಶ್‌ ಹಾಸನ, ಸಹ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕರು: ಆಕಾಶ್‌ ಹಾಸನ, ಸಂಕಲನ: ಶ್ರೀನಿವಾಸ್‌ ಪಿ. ಬಾಬು ಮತ್ತು ಮೆವಿನ್‌ ಜೋಯಲ್‌ ಪಿಂಟೋ, ಸಾಹಿತ್ಯ ಸಂಗೀತ: ರಾಜೇಶ್‌ ಭಟ್‌ ಮೂಡುಬಿದಿರೆ, ಹಿನ್ನೆಲೆ ಸಂಗೀತ: ಎಸ್‌.ಪಿ. ಚಂದ್ರಕಾಂತ್‌, ನಿರ್ಮಾಣ ನಿರ್ವಹಣೆ: ಸತೀಶ್‌ ಬ್ರಹ್ಮಾವರ್‌, ಕಲಾ- ನಿರ್ದೇಶನ: ಹರೀಶ್‌ ಆಚಾರ್ಯ, ವಸ್ತ್ರಾಲಂಕಾರ: ವಲ್ಲಿ , ವರ್ಣಾಲಂಕಾರ: ಜಗದೀಶ್‌, ನಿರ್ದೇಶನ ಸಹಾಯ: ಕೆ. ಜಗದೀಶ್‌ ರೆಡ್ಡಿ, ಸಂದೀಪ್‌ ಬಾರಾಡಿ , ನವೀನ್‌ ನೆರೋಳ್ತಾಡಿ.

Advertisement

Udayavani is now on Telegram. Click here to join our channel and stay updated with the latest news.

Next