Advertisement

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ: ಸಂಭ್ರಮದ ಶಿವರಾತ್ರಿ ಮಹೋತ್ಸವ

12:41 PM Feb 25, 2017 | Team Udayavani |

ಕೋಟೇಶ್ವರ: ಇಲ್ಲಿನ  ಪ್ರಸಿದ್ಧ ಸಪ್ತ ಕ್ಷೇತ್ರಗಳಲ್ಲೊಂದಾದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರದಂದು ನೆರೆದ ಸಹಸ್ರಾರು ಭಕ್ತರ ಸಮುಖದಲ್ಲಿ ಶಿವರಾತ್ರಿ ಆಚರಣೆಯು ಸಂಭ್ರದಿಂದ ಜರಗಿತು.

Advertisement

ದೇವಳದ ಮೊಕ್ತೇಸರ ಕುಮಾರ ಐತಾಳ್‌ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ದೇವಳದ ಆಡಳಿತಾಧಿಕಾರಿ ಚಂದ್ರಶೇಖರ, ಕಾರ್ಯನಿರ್ವಹಣಾಧಿಕಾರಿ ಗಣೇಶ್‌ ರಾವ್‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಧರ್ಮದರ್ಶಿಗಳ ಸಹಿತ ವಿವಿಧ ಸಂಘಟನೆಗಳ ಪ್ರಮುಖರು ಭಕ್ತರ ಸುಗಮ ದರ್ಶನಕ್ಕೆ ನೆರವಾದರು.ಆಸುಪಾಸಿನ 14 ಗ್ರಾಮಗಳ ನಂಬಿದ ಭಕ್ತರು ಶ್ರೀ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಿತು.ಸಂಜೆ ರಂಗಪೂಜೆ ಹಾಗೂ ಸಣ್ಣ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next