ಹೊಸದಿಲ್ಲಿ: ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ರಾಜಕಾರಣಿಗಾಗಿ ಎತ್ತರಕ್ಕೆ ಬೆಳೆದಿರುವ ಕಪಿಲ್ ಸಿಬಲ್, ಪಿ. ಚಿದಂಬರಂ, ಅಭಿಷೇಕ್ ಮನು ಸಿಂ Ì ಅವರಂಥ ಘಟಾನುಘಟಿಗಳು ತಮ್ಮ ವಕೀಲಿಕೆ ವೃತ್ತಿ ತೊರೆಯಬೇಕಾದ ಸಂದರ್ಭ ಎದುರಾಗಿದೆಯೇ? “ದ ಬಾರ್ ಕೌನ್ಸಿಲ್ ಆಫ್ ಇಂಡಿಯಾ’ (ಬಿಸಿಐ) ದೇಶದ ರಾಜಕಾರಣಿ-ಕಂ-ವಕೀಲ ವೃತ್ತಿಯ ಸುಮಾರು 500ಕ್ಕೂ ಹೆಚ್ಚು ಸಂಸದರು, ಶಾಸಕರಿಗೆ ನೋಟಿಸ್ ಜಾರಿಗೊಳಿಸಿ ಈ ಕುರಿತು ಪ್ರತಿಕ್ರಿಯೆ ಕೋರಿದೆ.
ಜನಪ್ರತಿನಿಧಿಗಳು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳದಂತೆ ಆದೇಶಿಸಬೇಕೆಂದು ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ್ ಮನವಿಗೆ ಸ್ಪಂದಿಸಿರುವ ಬಿಸಿಐ, ಈ ಪ್ರಕರಣವನ್ನು ಬಿಸಿಐ ತಜ್ಞರ ಸಮಿತಿಗೆ ವಹಿಸಿತ್ತು. ಇದೀಗ, ತಜ್ಞರ ಸಮಿತಿ ಈ ನೋಟಿಸ್ ಜಾರಿಗೊಳಿಸಿದೆ.
ಮೇಲ್ಮನವಿಯಲ್ಲೇನಿದೆ?: ಯಾವುದೇ ನ್ಯಾಯಾಧೀಶರಿಗೆ ವಾಗ್ಧಂಡನೆ ವಿಧಿಸುವ ಅಧಿಕಾರ ಶಾಸಕರು, ಸಂಸದರಿಗಿರುತ್ತದೆ. ಹಾಗಾಗಿ, ಯಾವುದೇ ಜನಪ್ರತಿನಿಧಿಯು ನ್ಯಾಯಾಲಯ ದಲ್ಲಿ ವಾದ ಮಂಡಿಸುವಾಗ ನ್ಯಾಯಪೀಠದಲ್ಲಿ ಕುಳಿತಿರುವ ನ್ಯಾಯಾಧೀಶ “ಸ್ವಹಿತಾಸಕ್ತಿ ಸಂಘ ರ್ಷ’ದ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇರು ತ್ತದೆ. ವಾಗ್ಧಂಡನೆ ಭೀತಿಯಿಂದಾಗಿ ವಾದ ಮಂಡಿ ಸುವ ಸಂಸದ, ಶಾಸಕರ ಪರವಾಗಿ ನ್ಯಾಯ ನೀಡುವ ಅನಿವಾರ್ಯತೆಗೆ ಒಳಗಾಗು ತ್ತಾನೆ ಎಂಬುದು ಉಪಾಧ್ಯಾಯ್ ಅವರ ವಾದ.
ಮತ್ತೂಂದು ವಿಚಾರವೆಂದರೆ, ಸರ್ಕಾರಿ ನೌಕರರು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳ ಬಾರದೆಂಬ ನಿಯಮವಿದೆ. ದೇಶದ ಎಲ್ಲಾ ಸಂಸದರು ಹಾಗೂ ಶಾಸಕರು ಸರಕಾರದ ನಿಧಿಯಿಂದಲೇ ತಮ್ಮ ವೇತನ ಪಡೆಯುವು ದರಿಂದ ಅವರೂ ಸರ್ಕಾರಿ ನೌಕರರೆಂದೇ ಪರಿಗಣಿಸಲ್ಪಡುತ್ತಾರೆ. ಈ ಹಿನ್ನೆಲೆಯಲ್ಲೂ ಅವರನ್ನು ವಕೀಲಿಕೆಯಿಂದ ದೂರವಿಡಬೇಕೆಂದು ಉಪಾಧ್ಯಾಯ್ ಮನವಿಯಲ್ಲಿ ಹೇಳಿದ್ದಾರೆ.
ಯಾರ್ಯಾರಿಗೆ ನೋಟಿಸ್?
ಅರುಣ್ ಜೇಟಿÉ, ಕಪಿಲ್ ಸಿಬಲ್, ಪಿ. ಚಿದಂಬರಂ, ಕೆಟಿಎಸ್ ತುಳಸಿ, ಅಭಿಷೇಕ್ ಮನು ಸಿಂ Ì, ಕಲ್ಯಾಣ್ ಬ್ಯಾನರ್ಜಿ ಹಾಗೂ ಮೀನಾಕ್ಷಿ ಲೇಖೀ ಮುಂತಾದವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ವಾರದೊಳಗೆ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ಜ. 22ಕ್ಕೆ ನಡೆಯಲಿದೆ.